ADVERTISEMENT

ಮಹಾರಾಷ್ಟ್ರ ಬಾಕ್ಸರ್‌ಗಳ ಮಿಂಚು

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ರೋಹ್ಟಕ್: ಮಹಾರಾಷ್ಟ್ರ ಮತ್ತು ಮಣಿಪುರದ ಮಹಿಳಾ ಬಾಕ್ಸರ್‌ಗಳು ರಾಷ್ಟ್ರೀಯ ಯುವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಮಿಂಚಿದರು. ಹರಿಯಾಣದ ಪುರುಷರು ಕೂಡ ಗಮನಾರ್ಹ ಸಾಧನೆ ಮಾಡಿದರು.

ಇಲ್ಲಿನ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ನಡೆದ ಸ್ಪರ್ಧೆಗಳಲ್ಲಿ ಮಹಾರಾಷ್ಟ್ರದ ಸಾಕ್ಷಿ ಗೈಧಾನಿ, ಸಾನಿಕಾ ಸಾಸಣೆ ಮತ್ತು ನಿಕಿತಾ ರೋಖಡೆ ಮಹಿಳಾ ವಿಭಾಗದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

ಮಹಾರಾಷ್ಟ್ರದ ಮಹಿಳೆಯರು ಪಾಲ್ಗೊಂಡ ಬಹುತೇಕ ಎಲ್ಲ ವಿಭಾಗದಲ್ಲೂ ಗೆಲುವು ಸಾಧಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.