ADVERTISEMENT

ಮಹಿಳಾ ‘ಎ’ ಡಿವಿಷನ್ ಹಾಕಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಮೈಸೂರು: ಮಾರ್ಚ್ 5ರಿಂದ 13ರವರೆಗೆ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಬಿ ಡಿವಿಷನ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಹಾಕಿ ಕರ್ನಾಟಕ ಶನಿವಾರದಿಂದ ಮಾ 23ರವರೆಗೆ ‘ಎ‘ ಡಿವಿಷನ್ ಚಾಂಪಿಯನ್‌ಷಿಪ್ ಆತಿಥ್ಯ ವಹಿಸುತ್ತಿದೆ.

ಕಳೆದ ಬಾರಿಯ ಚಾಂಪಿಯನ್ ಹರಿಯಾಣ ತಂಡವು ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ನಾಲ್ಕು ಗುಂಪುಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. 

ಅತಿಥೇಯ ಕರ್ನಾಟಕ ತಂಡವು ಬಿ ಗುಂಪಿನಲ್ಲಿ ಆಡಲಿದೆ. ಮೈಸೂರಿನ ಡಿವೈಎಸ್‌ಎಸ್‌ ವಸತಿ ನಿಲಯದ ಒಂಬತ್ತು ಆಟಗಾರ್ತಿಯರು ಸ್ಥಾನ ತಂಡದಲ್ಲಿ ಪಡೆದಿದ್ದು ತವರಿನ ಅಂಗಳದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ.  18ರಂದು ತನ್ನ ಗುಂಪಿನ ಮೊದಲ ಲೀಗ್ ಪಂದ್ಯವನ್ನು ಮಧ್ಯಪ್ರದೇಶ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.