ADVERTISEMENT

ಮಿಂಚಿದ ಮಿಥುನ್: ಕರ್ನಾಟಕ ತಂಡಕ್ಕೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಚೆನ್ನೈ (ಐಎಎನ್‌ಎಸ್): ಅಭಿಮನ್ಯು ಮಿಥುನ್ ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೇರಳ ವಿರುದ್ಧ ಪಂದ್ಯದಲ್ಲಿ ಮೂರು ರನ್‌ಗಳ ರೋಚಕ ಗೆಲುವು ಪಡೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಕರ್ನಾಟಕ 130 ರನ್ ಗುರಿಯನ್ನು ಎದುರಾಳಿ ಕೇರಳದ ಮುಂದಿಟ್ಟಿತು. ಕೇರಳ ಗೆಲುವಿನ ದಡ ಸೇರುವ ಹಾದಿಯಲ್ಲಿತ್ತು. ಆದರೆ ಮಿಥುನ್ ಅದಕ್ಕೆ ಅವಕಾಶ ನೀಡಲಿಲ್ಲ. 37 ರನ್ ನೀಡಿ ಐದು ವಿಕೆಟ್ ಕಬಳಿಸಿ ಕರ್ನಾಟಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಪಂದ್ಯದಲ್ಲಿ ಕರ್ನಾಟಕ ಗೋವಾ ತಂಡವನ್ನು ಸೋಲಿಸಿತ್ತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 129. (ಭರತ್ ಚಿಪ್ಲಿ 36, ಸಿ.ಎಂ. ಗೌತಮ್ 20; ಕೆ.ಜೆ. ರಾಜೇಶ್ 16ಕ್ಕೆ3, ವಿ.ಎ. ಜಗದೀಶ್ 23ಕ್ಕೆ2).

ADVERTISEMENT

ಕೇರಳ: 19 ಓವರ್‌ಗಳಲ್ಲಿ 126. (ವಿ.ಎ. ಜಗದೀಶ್ 44; ಅಭಿಮನ್ಯು ಮಿಥುನ್ 37ಕ್ಕೆ5). ಫಲಿತಾಂಶ: ಕರ್ನಾಟಕಕ್ಕೆ 3 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.