ADVERTISEMENT

ಮಿಚೆಲ್ ಸ್ಟಾರ್ಕ್‌ಗೆ ಐದು ವಿಕೆಟ್‌

ಏಜೆನ್ಸೀಸ್
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಮಿಷೆಕ್‌ ಸ್ಟಾರ್ಕ್‌ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು.
ಮಿಷೆಕ್‌ ಸ್ಟಾರ್ಕ್‌ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು.   

ಡರ್ಬನ್‌, ದಕ್ಷಿಣ ಆಫ್ರಿಕಾ: ಬ್ಯಾಟಿಂಗ್‌ನಲ್ಲಿ ಮಿಂಚಿದ ಮಿಚೆಲ್‌ ಮಾರ್ಷ್‌ ಮತ್ತು ಎದುರಾಳಿ ತಂಡದ ಐದು ವಿಕೆಟ್ ಉರುಳಿಸಿದ ಮಿಚೆಲ್ ಸ್ಟಾರ್ಕ್‌ ಅವರ ಅಮೋಘ ಆಟದ ಬಲದಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಮೊದಲ ದಿನ ಐದು ವಿಕೆಟ್‌ಗಳಿಗೆ 225 ರನ್‌ ಗಳಿಸಿದ್ದ ಪ್ರವಾಸಿ ತಂಡ ಎರಡನೇ ದಿನವಾದ ಶುಕ್ರವಾರ 351 ರನ್‌ಗಳಿಗೆ ಆಲೌಟಾಯಿತು. ನಂತರ ಎದುರಾಳಿಗಳನ್ನು 162 ರನ್‌ಗಳಿಗೆ ಕೆಡವಿತು. ಈ ಮೂಲಕ 189 ರನ್‌ಗಳ ಮುನ್ನಡೆ ಸಾಧಿಸಿತು.

ಗುರುವಾರ 32 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಮಿಚೆಲ್ ಮಾರ್ಷ್‌ ಶುಕ್ರವಾರ ಅಮೋಘ ಬ್ಯಾಟಿಂಗ್ ಮುಂದುವರಿಸಿದರು. ನಾಲ್ಕು ರನ್‌ಗಳಿಂದ ಶತಕದಿಂದ ತಪ್ಪಿಸಿಕೊಂಡ ಅವರು ತಂಡಕ್ಕೆ ಉತ್ತಮ ಮೊತ್ತದ ಕಾಣಿಕೆ ನೀಡಿದರು. 35 ರನ್ ಗಳಿಸಿದ ಮಿಚೆಲ್ ಸ್ಟಾರ್ಕ್‌ ಉತ್ತಮ ಬೆಂಬಲ ನೀಡಿದರು.

ADVERTISEMENT

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌:
(ಗುರುವಾರದ ಅಂತ್ಯಕ್ಕೆ 76 ಓವರ್‌ಗಳಲ್ಲಿ 5ಕ್ಕೆ225):110.4 ಓವರ್‌ಗಳಲ್ಲಿ 351(ಮಿಚೆಲ್ ಮಾರ್ಷ್‌ 96, ಟಿಮ್ ಪೈನೆ 25, ಮಿಚೆಲ್ ಸ್ಟಾರ್ಕ್‌ 35; ವೆರ್ನಾನ್ ಫಿಲ್ಯಾಂಡರ್‌ 59ಕ್ಕೆ3, ಕೇಶವ್‌ ಮಹಾರಾಜ್‌ 123ಕ್ಕೆ5, ಕಗಿಸೊ ರಬಾಡ 74ಕ್ಕೆ2); ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 51.4 ಓವರ್‌ಗಳಲ್ಲಿ 162 (ಏಡನ್ ಮಾರ್ಕರಮ್‌ 32, ಎಬಿ ಡಿವಿಲಿಯರ್ಸ್‌ ಅಜೇಯ 71, ಕ್ವಿಂಟನ್ ಡಿಕಾಕ್‌ 20; ಮಿಚೆಲ್‌ ಸ್ಟಾರ್ಕ್‌ 34ಕ್ಕೆ5, ನೇಥನ್ ಲಿಯಾನ್‌ 50ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.