ADVERTISEMENT

ಮೀಡಿಯಾ ಕಪ್ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬೆಂಗಳೂರು: ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಮ್ಮಿಕೊಂಡಿರುವ ‘ಆಚಾರ್ಯ ಹಬ್ಬ’ದ ಅಂಗವಾಗಿ ಮಾರ್ಚ್ 24 ರಿಂದ ‘ಮೀಡಿಯಾ ಕಪ್ -2011’ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಪತ್ರಿಕೆ, ಟಿವಿ ಚಾನೆಲ್ ಮತ್ತು ರೇಡಿಯೊ ಒಳಗೊಂಡಂತೆ ವಿವಿಧ ಮಾಧ್ಯಮ ಸಂಸ್ಥೆಗಳ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಗಳು ಶ್ರೀಮತಿ ನಾಗರತ್ನಮ್ಮ ಕ್ರೀಡಾಂಗಣ, ಆಚಾರ್ಯ ಇನ್‌ಸ್ಟಿಟ್ಯೂಟ್ ಕ್ಯಾಂಪಸ್, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು- ಇಲ್ಲಿ ನಡೆಯಲಿವೆ.
ಹೆಚ್ಚಿನ ಮಾಹಿತಿಗೆ ಮೊ: 9742347536 (ರಾಮಚಂದ್ರನ್) ಅಥವಾ 9739865198 (ವರುಣ್) ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.