ADVERTISEMENT

ಮುಂಬೈಗೆ ಶರಣಾದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಎದುರು ಸೋಲು ಕಂಡಿದ್ದಾರೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 179 ರನ್‌ಗಳ ಅಲ್ಪ ಗುರಿಯನ್ನು ಮುಂಬೈ ಕೇವಲ 29.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಾಸೀಮ್ ಜಾಫರ್ (68) ಹಾಗೂ ಅಜಿಂಕ್ಯ ರಹಾನೆ (ಔಟಾಗದೆ 71) ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟರು. ಇವರಿಬ್ಬರು ಮೊದಲ ವಿಕೆಟ್‌ಗೆ 119 ರನ್ ಸೇರಿಸಿದರು.

ಆದರೆ ಬ್ಯಾಟಿಂಗ್‌ನಲ್ಲಿ ಕರ್ನಾಟಕ ತಂಡದ ಆಟಗಾರರು ಎಡವಿದರು. ಈ ತಂಡ ಒಂದು ಹಂತದಲ್ಲಿ ಕೇವಲ 57 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ಸರದಿಯ ಬ್ಯಾಟ್ಸ್‌ಮನ್‌ಗಳು ಕೊಂಚ ಪ್ರತಿರೋಧ ತೋರಿದರು. ಈ ಪರಿಣಾಮ ಈ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಲು ಸಾಧ್ಯವಾಯಿತು. ಮುಂಬೈನ ಕ್ಷೇಮಲ್ (19ಕ್ಕೆ3) ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿದರು. ಮನೀಷ್ ಪಾಂಡೆ (0) ಮತ್ತೆ ವಿಫಲರಾದರು. 

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 (ರಾಬಿನ್ ಉತ್ತಪ್ಪ 30, ಸುನಿಲ್ ರಾಜು 30, ರಾಜೂ ಭಟ್ಕಳ್ 38, ಅಬ್ರಾರ್ ಕಾಜಿ ಔಟಾಗದೆ 22; ಕ್ಷೇಮಲ್ 19ಕ್ಕೆ3, ಅಂಕಿತ್ ಚವಾಣ್ 29ಕ್ಕೆ2); ಮುಂಬೈ: 29.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 (ವಾಸೀಮ್ ಜಾಫರ್ 68, ಅಜಿಂಕ್ಯ ರಹಾನೆ ಔಟಾಗದೆ 71, ಸುಶಾಂತ್ ಮರಾಠೆ ಔಟಾಗದೆ 31; ಅಬ್ರಾರ್ ಕಾಜಿ 45ಕ್ಕೆ1). ಫಲಿತಾಂಶ: ಮುಂಬೈಗೆ 9 ವಿಕೆಟ್ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.