ADVERTISEMENT

ಮೆಸ್ಸಿ ‘ಹ್ಯಾಟ್ರಿಕ್‌’ ಮೋಡಿ

ರಾಯಿಟರ್ಸ್
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಮುಂದಿರುವವರು) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. -ರಾಯಿಟರ್ಸ್‌ ಚಿತ್ರ
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಮುಂದಿರುವವರು) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. -ರಾಯಿಟರ್ಸ್‌ ಚಿತ್ರ   

ಬ್ಯೂನಸ್‌ ಐರಿಸ್‌: ಲಯೊನೆಲ್‌ ಮೆಸ್ಸಿ ಅವರ ‘ಹ್ಯಾಟ್ರಿಕ್‌’ ಸಾಧನೆಯ ನೆರವಿನಿಂದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಲಾ ಬ್ಯಾಂಬೊನೆರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹಣಾಹಣಿಯಲ್ಲಿ ಅರ್ಜೆಂಟೀನಾ 4–0 ಗೋಲುಗಳಿಂದ ಹೈಟಿ ತಂಡವನ್ನು ಪರಾಭವಗೊಳಿಸಿತು.

ಅರ್ಜೆಂಟೀನಾ ತಂಡಕ್ಕೆ 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶದಲ್ಲಿ ಮೆಸ್ಸಿ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

ದ್ವಿತೀಯಾರ್ಧದಲ್ಲೂ ಅರ್ಜೆಂಟೀನಾ ಆಟಗಾರರು ಮೋಡಿ ಮಾಡಿದರು. 58ನೇ ನಿಮಿಷದಲ್ಲಿ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಮೆಸ್ಸಿ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿದರು.

66ನೇ ನಿಮಿಷದಲ್ಲೂ ಮೆಸ್ಸಿ ಕಾಲ್ಚಳಕ ತೋರಿದರು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಅವರು ಅದನ್ನು ಎದುರಾಳಿ ಆವರಣದ 30 ಗಜ ದೂರದಿಂದ ಗೋಲುಪೆಟ್ಟಿಗೆಯೊಳಗೆ ಕಳಿಸಿದರು.

69ನೇ ನಿಮಿಷದಲ್ಲಿ ಸರ್ಜಿಯೊ ಅಗುವೆರಾ ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಲಿಮಾದಲ್ಲಿ ನಡೆದ ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ಪೆರು 2–0 ಗೋಲುಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಪರಾಭವಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.