ADVERTISEMENT

ಮೊದಲ ಟೆಸ್ಟ್: ಪಾಕಿಸ್ತಾನ ತಂಡದ ಬಿಗಿ ಹಿಡಿತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಅಬುಧಾಬಿ (ಎಎಫ್‌ಪಿ): ತೌಫೀಕ್ ಉಮರ್ (236) ಅವರ ಆಕರ್ಷಕ ದ್ವಿಶತಕದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದೆ.

ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ಆರು ವಿಕೆಟ್‌ಗೆ 511 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 314 ರನ್‌ಗಳ ಭಾರಿ ಮುನ್ನಡೆ ಪಡೆಯಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಗುರುವಾರ ಮೂರನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ ನಲ್ಲಿ ಒಂದು ವಿಕೆಟ್‌ಗೆ 47 ರನ್ ಗಳಿಸಿತ್ತು. ಎರಡನೇ ದಿನ ಅಜೇಯ 109 ರನ್ ಗಳಿಸಿದ್ದ ತೌಫೀಕ್ ಗುರುವಾರ ದ್ವಿಶತಕದ ಗಡಿ ದಾಟಿದರು. 

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 197. ಮತ್ತು ಎರಡನೇ ಇನಿಂಗ್ಸ್ 11 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 47. ಪಾಕಿಸ್ತಾನ: ಮೊದಲ ಇನಿಂಗ್ಸ್ 174.4 ಓವರ್‌ಗಳಲ್ಲಿ 6 ವಿಕೆಟ್‌ಗೆ 511 ಡಿಕ್ಲೇರ್ಡ್ (ಮೊಹಮ್ಮದ್ ಹಫೀಜ್ 75, ತೌಫೀಕ್ ಉಮರ್ 236, ಅಜರ್ ಅಲಿ 70, ಮಿಸ್ಬಾ ಉಲ್ ಹಕ್ 46).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.