ADVERTISEMENT

ಯುಡಿಆರ್‌ಎಸ್ ಒಂದು ತಮಾಷೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 17:00 IST
Last Updated 7 ಮಾರ್ಚ್ 2011, 17:00 IST

ಕರಾಚಿ (ಪಿಟಿಐ): ‘ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅನುಷ್ಠಾನಕ್ಕೆ ತರಲಾದ ಅಂಪೈರ್ ತೀರ್ಪಿನ ಪುನರ್ ಪರಿಶೀಲನೆ ವ್ಯವಸ್ಥೆಯಿಂದ ಈಗಿರುವ ರೂಪದಲ್ಲಿ ಯಾವುದೇ ಪ್ರಯೋಜನವಿಲ್ಲ. ಹಾಲಿ ಈ ವ್ಯವಸ್ಥೆ ಒಂದು ತಮಾಷೆಯಂತೆ ಭಾಸವಾಗುತ್ತಿದೆ’ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಷೀದ್ ಲತಿಫ್ ಅಭಿಪ್ರಾಯಪಟ್ಟಿದ್ದಾರೆ.

ಯುಡಿಆರ್‌ಎಸ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಮಹೇಂದ್ರ ಸಿಂಗ್  ಅವರ ಅಭಿಪ್ರಾಯಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ‘ತೀರ್ಪನ್ನು ಪುನರ್ ಪರಿಶೀಲಿಸಲು ವ್ಯವಸ್ಥೆಯನ್ನು ಬಳಸುವ ರೀತಿ ಹಾಗೂ ಅಂಪೈರ್ ತೀರ್ಪನ್ನು ಎತ್ತಿ ಹಿಡಿಯುವ ಇಲ್ಲವೆ ರದ್ದುಗೊಳಿಸುವ ಕ್ರಮ ತಮಾಷೆಯಂತಲ್ಲದೆ ಬೇರೆ ರೀತಿಯಲ್ಲಿ ಕಾಣದು’ ಎಂದು ಅವರು ತಿಳಿಸಿದ್ದಾರೆ.

‘ಪರಿಪೂರ್ಣ ತಂತ್ರಜ್ಞಾನದ ಬಳಕೆಯಿಲ್ಲದೆ ಯಥಾ ಸ್ಥಿತಿಯಲ್ಲಿ ಯುಡಿಆರ್‌ಎಸ್ ಬಳಕೆ ಮಾಡಿದರೆ, ಅದರ ಉದ್ದೇಶ ಈಡೇರದು. ಚೆಂಡಿನ ಗತಿಯನ್ನು ತೋರಿಸುವ ಸದ್ಯದ ವ್ಯವ ಸ್ಥೆಯು ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.