ADVERTISEMENT

ರಕ್ತದಾನಿ ರೊನಾಲ್ಡೊ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 20:06 IST
Last Updated 17 ಜೂನ್ 2018, 20:06 IST
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ   

ಮಾಸ್ಕೊ: ಫುಟ್‌ಬಾಲ್, ಕ್ರಿಕೆಟ್‌ ಮತ್ತಿತರ ಕ್ರೀಡೆಗಳ ಬಹಳಷ್ಟು ತಾರೆಗಳಿಗೆ ತಮ್ಮ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ನೆಚ್ಚಿನ ಹವ್ಯಾಸ. ಆದರೆ, ಫುಟ್‌ಬಾಲ್ ಲೋಕದ ದಿಗ್ಗಜ, ಪೋರ್ಚುಗಲ್ ತಂಡದ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಟ್ಯಾಟೂಪ್ರಿಯ ಅಲ್ಲ. ಅದಕ್ಕೆ ಕಾರಣ ಏನು ಗೊತ್ತೆ?

ಅವರು ರಕ್ತದಾನಿಯಾಗಿರುವುದರಿಂದ ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿಲ್ಲವಂತೆ. ರೊನಾಲ್ಡೊ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. ಅದಕ್ಕಾಗಿ ತಮ್ಮ ಮನೆಯಲ್ಲಿಯೇ ಒಂದು ಸುಸಜ್ಜಿತ ಲ್ಯಾಬೊರೇಟರಿ ಸಿದ್ಧಗೊಳಿಸಿದ್ದಾರೆ. ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಅದಕ್ಕೆ ಬಳಸುವ ಶಾಯಿಯು ಚರ್ಮದ ಮೂಲಕ ರಕ್ತಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಟ್ಯಾಟೂ ಹಾಕಿಸಿಕೊಂಡು ಒಂದು ವರ್ಷದವರೆಗೆ ರಕ್ತದಾನ ಮಾಡುವ ಅವಕಾಶ ಇಲ್ಲ ಎಂದು ‘ದಿ ಸನ್’ ವೆಬ್‌ಸೈಟ್ ವರದಿ ಮಾಡಿದೆ.ಅವ

ರು ಬೋನ್ ಮ್ಯಾರೊ ಕೂಡ ದಾನ ಮಾಡಿದ್ದಾರೆ. ತಮ್ಮ ತಂಡದ ಸಹ ಆಟಗಾರ ಕಾರ್ಲೋಸ್ ಮಾರ್ಟಿನ್ ಅವರ ಎರಡು ವರ್ಷದ ಮಗ ಬೋನ್ ಮ್ಯಾರೊ ಸಮಸ್ಯೆಯಿಂದ ಬಳಲಿದಾಗ ರೊನಾಲ್ಡೊ ದಾನ ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಶುಕ್ರವಾರ ಮಧ್ಯರಾತ್ರಿ ನಡೆದಿದ್ದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಹ್ಯಾಟ್ರಿಕ್ ಗೋಲು ಗಳಿಸಿದ್ದರು. ಪೋರ್ಚುಗಲ್ ತಂಡವು 3–3ರಿಂದ ಡ್ರಾ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.