ADVERTISEMENT

ರಣಜಿ ಕ್ರಿಕೆಟ್: ಸಚಿನ್ ಶತಕ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST
ರಣಜಿ ಕ್ರಿಕೆಟ್: ಸಚಿನ್ ಶತಕ
ರಣಜಿ ಕ್ರಿಕೆಟ್: ಸಚಿನ್ ಶತಕ   

ಮುಂಬೈ (ಪಿಟಿಐ): ಕಳೆದ ಕೆಲ ಸಮಯಗಳಿಂದ ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದ ಸಚಿನ್ ತೆಂಡೂಲ್ಕರ್ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡರು. ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಅವರು ಆಕರ್ಷಕ ಶತಕ ಗಳಿಸಿದರು.

ಸಚಿನ್ (137) ಮತ್ತು ಅಜಿಂಕ್ಯ ರಹಾನೆ (ಅಜೇಯ 105) ಅವರ ಉತ್ತಮ ಆಟದ ನೆರವಿನಿಂದ ಮುಂಬೈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 344 ರನ್ ಗಳಿಸಿತ್ತು.
136 ಎಸೆತಗಳನ್ನು ಎದುರಿಸಿದ ಸಚಿನ್ 21 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.
ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಸಚಿನ್ ಹಾಗೂ ರಹಾನೆ 200 ರನ್ ಸೇರಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಆದಿತ್ಯ ತಾರೆ 47 ರನ್ ಗಳಿಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಸಚಿನ್ ರಣಜಿ ಪಂದ್ಯ ಆಡಲು ನಿರ್ಧರಿಸಿದ್ದರು. ಕೆಲ ತಿಂಗಳ ಹಿಂದೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ದೊಡ್ಡ ಇನಿಂಗ್ಸ್ ಕಟ್ಟಲು ಅವರು ವಿಫಲರಾಗಿದ್ದರು. ಮಾತ್ರವಲ್ಲ, ಸರಣಿಯಲ್ಲಿ ಒಟ್ಟು ಮೂರು ಸಲ `ಕ್ಲೀನ್‌ಬೌಲ್ಡ್~ ಆಗಿದ್ದರು.

ಸಂಕ್ಷಿಪ್ತ ಸ್ಕೋರ್: ಮುಂಬೈ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 344 (ಆದಿತ್ಯ ತಾರೆ 47, ಅಜಿಂಕ್ಯ ರಹಾನೆ ಬ್ಯಾಟಿಂಗ್ 105, ಸಚಿನ್ ತೆಂಡೂಲ್ಕರ್ 137, ಅನುರೀತ್ ಸಿಂಗ್ 53ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.