ADVERTISEMENT

ರಣಜಿ ಫೈನಲ್: ಸಂಕಷ್ಟದಲ್ಲಿ ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಚೆನ್ನೈ: ವಿನೀತ್ ಸಕ್ಸೇನಾ ಸುದೀರ್ಘ ಇನಿಂಗ್ಸ್ ರಾಜಸ್ತಾನಕ್ಕೆ ಮತ್ತೊಮ್ಮೆ ರಣಜಿ ಚಾಂಪಿಯನ್ ಆಗುವ ಕನಸನ್ನು ಕಟ್ಟಿಕೊಟ್ಟಿದೆ. ಅದೇ ಕಾರಣಕ್ಕೆ ತಮಿಳುನಾಡು ತಂಡ ಇಕ್ಕಟ್ಟಿಗೆ ಸಿಲುಕಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿ, ವಿಶಿಷ್ಟವಾದ ದಾಖಲೆ ಶ್ರೇಯ ಪಡೆದಿರುವ ವಿನೀತ್ ಬ್ಯಾಟ್‌ನಿಂದ ಹರಿದು ಬಂದಿದ್ದು 257 ರನ್ (665 ಎಸೆತ, 26 ಬೌಂಡರಿ, 2 ಸಿಕ್ಸರ್).

ಎರಡನೇ ದಿನದಾಟದಲ್ಲಿ 2 ವಿಕೆಟ್ ಕಳೆದುಕೊಂಡು 404 ರನ್ ಗಳಿಸಿದ್ದ ರಾಜಸ್ತಾನದವರು ಮೂರನೇ ದಿನವಾದ ಶನಿವಾರವೂ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಯೋಚನೆ ಮಾಡಲೇ ಇಲ್ಲ. ದೊಡ್ಡ ಮೊತ್ತ ಗಳಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿದರೂ ಸಾಕು ಪ್ರಶಸ್ತಿ ತಮ್ಮದಾಗುತ್ತದೆಂದು ಆಲ್‌ಔಟ್ ಆಗುವವರೆಗೆ ಆಡಿದರು. 245 ಓವರುಗಳ ಆಟದಲ್ಲಿ ಹೃಷಿಕೇಶ್ ಕಾನೀಟ್ಕರ್ ನೇತೃತ್ವದ ತಂಡವು ಒಟ್ಟು ಮೊತ್ತವನ್ನು 621 ರನ್ ಆಗಿಸಿಕೊಂಡಿತು.

ಈ ಫೈನಲ್ ಪಂದ್ಯದ ಇನ್ನೆರಡು ದಿನಗಳ ಆಟ ಬಾಕಿ ಇದೆ. ಅಷ್ಟರಲ್ಲಿ ಸ್ಪಷ್ಟ ಫಲಿತಾಂಶ ಹೊರಹೊಮ್ಮುವಂತೆ ಮಾಡುವುದು ರಾಜಸ್ತಾನದ ನಿರೀಕ್ಷೆ. ಈಗಾಗಲೇ ಪ್ರಥಮ ಇನಿಂಗ್ಸ್‌ನಲ್ಲಿ ತಮಿಳುನಾಡು ಮೂರು ಮಹತ್ವದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.

ರಾಜಸ್ತಾನದ ರಿತುರಾಜ್ ಸಿಂಗ್ (27ಕ್ಕೆ2) ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಪ್ರಭಾವಿ ಎನಿಸಿದರು. ಇದೇ ಬೌಲರ್ ಎದುರು ಅಭಿನವ್ ಮುಕುಂದ್ ಹಾಗೂ ಮುರಳಿ ವಿಜಯ್ ಬಹು ಬೇಗ ಆಘಾತ ಅನುಭವಿಸಿದರು.

ಮುಂಚೂಣಿಯ ವೇಗಿ ಪಂಕಜ್ ಸಿಂಗ್ ಎಸೆತದಲ್ಲಿ ಅನುಭವಿ ಎಸ್.ಬದರೀನಾಥ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದ್ದರಿಂದ ತಮಿಳುನಾಡು ತಂಡಕ್ಕೆ ಮೊದಲ ಹತ್ತು ಓವರುಗಳಲ್ಲಿಯೇ ಆಪತ್ತು. ದಿನದಾಟಕ್ಕೆ ತೆರೆ ಬೀಳುವ ಹೊತ್ತಿಗೆ ಅದು ಗಳಿಸಿದ್ದು 66 ರನ್ ಮಾತ್ರ.

ಇನಿಂಗ್ಸ್ ಹಿನ್ನಡೆಯ ಅಪಾಯ ತಪ್ಪಿಸಿಕೊಳ್ಳಲು ಇನ್ನೂ 555 ರನ್‌ಗಳನ್ನು ಗಳಿಸುವ ಅಸಾಧ್ಯ ಸವಾಲು ಆತಿಥೇಯರ ಮುಂದಿದೆ.

ಸ್ಕೋರ್ ವಿವರ:
ರಾಜಸ್ತಾನ: ಮೊದಲ ಇನಿಂಗ್ಸ್ 245 ಓವರುಗಳಲ್ಲಿ 621
(ಶುಕ್ರವಾರದ ಆಟದಲ್ಲಿ: 180 ಓವರುಗಳಲ್ಲಿ
2 ವಿಕೆಟ್ ನಷ್ಟಕ್ಕೆ 404)
ವಿನೀತ್ ಸಕ್ಸೇನಾ ಬಿ ಔಶಿಕ್ ಶ್ರೀನಿವಾಸ್  257
ರಾಬಿನ್ ಬಿಸ್ತ್ ಸಿ ವಸುದೇವದಾಸ್ ಬಿ ಸನ್ನಿ ಗುಪ್ತಾ  57
ರಶ್ಮಿ ಪರೀದಾ ಸಿ ಲಕ್ಷ್ಮೀಪತಿ ಬಾಲಾಜಿ ಬಿ ಜಗನ್ನಾಥನ್ ಕೌಶಿಕ್  40
ಪುನೀತ್ ಯಾದವ್ ಬಿ ಔಶಿಕ್ ಶ್ರೀನಿವಾಸ್  07
ದಿಶಾಂತ್ ಯಾಜ್ಞಿಕ್ ಸಿ ಯೋ ಮಹೇಶ್ ಬಿ ಸನ್ನಿ ಗುಪ್ತಾ  00
ಪಂಕಜ್ ಸಿಂಗ್ ಸಿ ಪ್ರಸನ್ನ ಬಿ ಔಶಿಕ್ ಶ್ರೀನಿವಾಸ್  22
ರಿತುರಾಜ್ ಸಿಂಗ್ ಬಿ ಜಗನ್ನಾಥನ್ ಕೌಶಿಕ್  45
ಗಜೇಂದ್ರ ಸಿಂಗ್ ಎಲ್‌ಬಿಡಬ್ಲ್ಯು ಬಿ ಜಗನ್ನಾಥನ್ ಕೌಶಿಕ್  04
ಸುಮಿತ್ ಮಾಥುರ್ ಔಟಾಗದೆ  01
ಇತರೆ: (ಬೈ-13, ಲೆಗ್‌ಬೈ-8, ವೈಡ್-3, ನೋಬಾಲ್-3)  27
ವಿಕೆಟ್ ಪತನ: 1-236 (ಆಕಾಶ್ ಚೋಪ್ರಾ; 104.1), 2-362 (ಹೃಷಿಕೇಶ್ ಕಾನೀಕ್ಟರ್; 156.4), 3-485 (ರಾಬಿನ್ ಬಿಸ್ತ್; 206.3), 4-509 (ವಿನೀತ್ ಸಕ್ಸೇನಾ; 219.2), 5-517 (ಪುನೀತ್ ಯಾದವ್; 221.1), 6-518 (ದಿಶಾಂತ್ ಯಾಜ್ಞಿಕ್; 222.3), 7-541 (ಪಂಕಜ್ ಸಿಂಗ್; 228.3), 8-614 (ರಶ್ಮಿ ಪರೀದಾ; 242.5), 9-620 (ರಿತುರಾಜ್ ಸಿಂಗ್; 244.4), 10-621 (ಗಜೇಂದ್ರ ಸಿಂಗ್; 244.6).
ಬೌಲಿಂಗ್: ಲಕ್ಷ್ಮೀಪತಿ ಬಾಲಾಜಿ 29-10-73-0 (ನೋಬಾಲ್-2), ಜಗನ್ನಾಥನ್ ಕೌಶಿಕ್ 47-14-91-3, ಯೋ ಮಹೇಶ್ 32-7-88-0 (ವೈಡ್-3), ಆರ್.ಔಶಿಕ್ ಶ್ರೀನಿವಾಸ್ 85-27-192-4, ಸನ್ನಿ ಗುಪ್ತಾ 46-8-127-3, ಅಭಿನವ್ ಮುಕುಂದ್ 2-0-6-0, ಕೆ.ವಾಸುದೇವ್‌ದಾಸ್ 1-0-5-0, ಮುರಳಿ ವಿಜಯ್ 3-0-18-0

ತಮಿಳುನಾಡು: ಪ್ರಥಮ ಇನಿಂಗ್ಸ್ 25 ಓವರುಗಳಲ್ಲಿ
3 ವಿಕೆಟ್‌ಗಳ ನಷ್ಟಕ್ಕೆ 66

ಅಭಿನವ್ ಮುಕುಂದ್ ಎಲ್‌ಬಿಡಬ್ಲ್ಯು ಬಿ ರಿತುರಾಜ್ ಸಿಂಗ್  00
ಮುರಳಿ ವಿಜಯ್ ಸಿ ಪುನೀತ್ ಯಾದವ್ ಬಿ ರಿತುರಾಜ್ ಸಿಂಗ್  15
ಎಸ್.ಬದರೀನಾಥ್ ಎಲ್‌ಬಿಡಬ್ಲ್ಯು ಬಿ ಪಂಕಜ್ ಸಿಂಗ್  06
ದಿನೇಶ್ ಕಾರ್ತಿಕ್ ಬ್ಯಾಟಿಂಗ್  13
ಕೆ.ವಾಸುದೇವ್‌ದಾಸ್ ಬ್ಯಾಟಿಂಗ್  25
ಇತರೆ: (ಲೆಗ್‌ಬೈ-6, ವೈಡ್-1)  07
ವಿಕೆಟ್ ಪತನ: 1-1 (ಅಭಿನವ್ ಮುಕುಂದ್; 1.6), 2-12 (ಎಸ್.ಬದರೀನಾಥ್; 6.6), 3-24 (ಮುರಳಿ ವಿಜಯ್; 9.5).
ಬೌಲಿಂಗ್: ಪಂಕಜ್ ಸಿಂಗ್ 8-4-16-1, ರಿತುರಾಜ್ ಸಿಂಗ್ 8-1-27-2, ಸುಮಿತ್ ಮಾಥುರ್ 6-3-8-0 (ವೈಡ್-1), ಗಜೇಂದ್ರ ಸಿಂಗ್ 3-1-9-0       

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.