ADVERTISEMENT

ರಣಜಿ: ಹುಬ್ಬಳ್ಳಿಗೆ ಬಂದಿಳಿದ ಪಂಜಾಬ್‌ ತಂಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಹುಬ್ಬಳ್ಳಿ: ಕರ್ನಾಟಕ ತಂಡದ ವಿರುದ್ಧ ಡಿಸೆಂಬರ್‌ 14ರಿಂದ ಇಲ್ಲಿನ ರಾಜ್‌ನಗರ ಕೆಎಸ್‌ಸಿಎ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಆಡಲಿರುವ ಪಂಜಾಬ್‌ ತಂಡ ಬುಧವಾರ ನಗರಕ್ಕೆ ಆಗಮಿಸಿತು.

ಭುಜದ ನೋವಿನಿಂದ ಬಳಲುತ್ತಿರುವ ಹರ್ಭಜನ್‌ ಸಿಂಗ್‌ ಬದಲಿಗೆ ಆಲ್‌ರೌಂಡರ್‌ ಮನ್‌ದೀಪ್‌ ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹರ್ಭಜನ್‌ ಸಿಂಗ್‌ ಕಳೆದ ಎರಡು ಪಂದ್ಯಗಳಲ್ಲಿ ಕೂಡ ಆಡಿರಲಿಲ್ಲ.  ಬುಧವಾರ ಮಧ್ಯಾಹ್ನ ಬಂದಿಳಿದ ತಂಡವನ್ನು ಹೋಟೆಲ್ ಗೇಟ್‌ವೇದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.