ADVERTISEMENT

ರಾಜ್ಯದ ಮೂವರಿಗೆ ಸ್ಥಾನ

ಕಾಮನ್‌ವೆಲ್ತ್‌ ಕೂಟಕ್ಕೆ ಭಾರತ ಬ್ಯಾಸ್ಕೆಟ್‌ಬಾಲ್‌ ತಂಡ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ರಾಜ್ಯದ ಮೂವರಿಗೆ ಸ್ಥಾನ
ರಾಜ್ಯದ ಮೂವರಿಗೆ ಸ್ಥಾನ   

ಬೆಂಗಳೂರು: ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ), ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾನುವಾರ ಭಾರತ ಪುರುಷರ ಮತ್ತು ಮಹಿಳಾ ತಂಡಗಳನ್ನು ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ ಮೂರು ಮಂದಿ ಸ್ಥಾನ ಗಳಿಸಿದ್ದಾರೆ.

ಮಂಡ್ಯದ ಎಚ್‌.ಎಂ.ಬಾಂಧವ್ಯ ಮತ್ತು ಮಡಿಕೇರಿಯ ಪಿ.ಯು.ನವನೀತಾ ಮಹಿಳಾ ತಂಡದಲ್ಲಿದ್ದಾರೆ. ಅರವಿಂದ್‌ ಆರ್ಮುಗಂ ಪುರುಷರ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಯದ್ವಿಂದರ್‌ ಸಿಂಗ್‌ ಮತ್ತು ಶಿರೀನ್‌ ಲಿಮಯೆ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳಾ ತಂಡಗಳನ್ನು ಮುನ್ನಡೆಸಲಿದ್ದಾರೆ.

ಭಾರತ ತಂಡದವರು ಕೂಟಕ್ಕೆ ಸಜ್ಜುಗೊಳ್ಳುವ ಸಲುವಾಗಿ ಸೋಮವಾರ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ಗೆ  ತೆರಳಲಿದ್ದಾರೆ.

ADVERTISEMENT

ಪುರುಷರ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಇಂಗ್ಲೆಂಡ್‌, ಕ್ಯಾಮರೂನ್‌ ಮತ್ತು ಸ್ಕಾಟ್ಲೆಂಡ್‌ ತಂಡಗಳೂ ಇದೇ ಗುಂಪಿನಲ್ಲಿವೆ.

ಮಹಿಳಾ ತಂಡ, ನ್ಯೂಜಿಲೆಂಡ್‌, ಜಮೈಕಾ ಮತ್ತು ಮಲೇಷ್ಯಾ ಜೊತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕಾಮನ್‌ವೆಲ್ತ್‌ ಕೂಟ ಏಪ್ರಿಲ್‌ 4ರಿಂದ 15ರವರೆಗೆ ನಡೆಯಲಿದೆ.

ತಂಡಗಳು ಇಂತಿವೆ: ಮಹಿಳೆಯರು: ಶಿರೀನ್‌ ಲಿಮಯೆ (ನಾಯಕಿ), ಶ್ರುತಿ ಮೆನನ್‌, ಮಧುಕುಮಾರಿ, ಪಿ.ಯು.ನವನೀತಾ, ಆರ್‌.ರಾಜಪ್ರಿಯದರ್ಶಿನಿ, ರಸ್‌ಪ್ರೀತ್‌ ಸಿಧು, ಎಚ್‌.ಎಂ.ಬಾಂಧವ್ಯ, ಗ್ರೀಷ್ಮಾ ಮೆರ್ಲಿನ್‌ ವರ್ಗೀಸ್‌, ಪಿ.ಜಿ.ಅಂಜನಾ, ಜೀನಾ ಸ್ಕರಿಯಾ, ಅನ್‌ಮೋಲ್‌ಪ್ರೀತ್‌ ಕೌರ್‌ ಮತ್ತು ಬರ್ಖಾ ಸೊಂಕಾರ.

ಮುಖ್ಯ ಕೋಚ್‌: ಜೊರಾನ್‌ ವಿಸಿಕ್‌,

ಕೋಚ್‌: ಶಿಬಾ ಮಾಗೊನ್‌, ಫಿಸಿಯೊ: ರಂಜನ್‌ ಶರ್ಮಾ, ಮ್ಯಾನೇಜರ್‌: ಅಜಯ್‌ ಸೂದ್‌.

ಪುರುಷರು: ರವಿ ಭಾರದ್ವಾಜ್‌, ಅರವಿಂದ್‌ ಆರ್ಮುಗಂ, ಸತ್ನಾಮ್‌ ಸಿಂಗ್‌, ಅರ್ಷ್‌ಪ್ರೀತ್‌ ಸಿಂಗ್‌ ಭುಲ್ಲಾರ್‌, ಅರವಿಂದ್‌ ಅಣ್ಣಾದುರೈ, ಪಿ.ಅಖಿಲನ್‌, ಜೆ.ಜಸ್ಟಿನ್‌, ಪಿ.ಜೀವನಾಥಮ್‌, ಯದ್ವಿಂದರ್‌ ಸಿಂಗ್‌, ಜೋಗಿಂದರ್‌ ಸಿಂಗ್‌, ಅಮೃತಪಾಲ್‌ ಸಿಂಗ್‌ ಮತ್ತು ಅಮ್ಜೋತ್ ಸಿಂಗ್‌. ಮುಖ್ಯ ಕೋಚ್‌: ರಾಜಿಂದರ್‌ ಸಿಂಗ್‌ ಮತ್ತು ಜಿ.ಆರ್‌.ಎಲ್‌. ಪ್ರಸಾದ್‌.

ಫಿಸಿಯೊ: ರಾಜಕುಮಾರ್‌ ದುಬೆ,

ಮ್ಯಾನೇಜರ್‌: ಶಕ್ತಿ ಸಿಂಗ್‌ ಗೊಹಿಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.