ADVERTISEMENT

ರಾಜ್ಯ ಸೈಕ್ಲಿಂಗ್: ಅಡಿವೆಪ್ಪ, ಶೈಲಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಕುಶಾಲನಗರ: ಬಾಗಲಕೋಟೆಯ ಅಡಿವೆಪ್ಪ ಅವಟಿ ಮತ್ತು ಶೈಲಾ ಮಟ್ಯಾಳ ಶನಿವಾರ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪಸಮಿತಿ ಆಶ್ರಯದಲ್ಲಿ ನಡೆದ ರಸ್ತೆ ಸೈಕ್ಲಿಂಗ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.


ಮೈಸೂರು ವರದಿ:  ಸಂಘಟನೆಯಲ್ಲಿ ಆದ ಕೆಲವು ತಾಂತ್ರಿಕ ಅವ್ಯವಸ್ಥೆಗಳಿಂದಾಗಿ ಎರಡು ದಿನ ನಡೆಯಬೇಕಿದ್ದ ಸೈಕಲ್ ರೇಸ್ ಒಂದೇ ದಿನಕ್ಕೆ ಮುಗಿಯಿತು.

`ಸೈಕ್ಲಿಸ್ಟ್‌ಗಳನ್ನು ಹಿಂಬಾಲಿಸುವ ಪೈಲೆಟ್‌ಗಳ (ಬೈಕ್ ಸವಾರರು) ಕೊರತೆಯಿಂದಾಗಿ ಸೈಕ್ಲಿಂಗ್ ಅನ್ನು ಮೊಟಕುಗೊಳಿಸಲಾಯಿತು. ಪೂರ್ವನಿರ್ಧಾರದಂತೆ ಶನಿವಾರ ಮೈಸೂರಿನಿಂದ ಮಡಿಕೇರಿಗೆ ಹೋಗಿ ರಾತ್ರಿ ವಿಶ್ರಾಂತಿ ಪಡೆದು, ಭಾನುವಾರ ಬೆಳಿಗ್ಗೆ ಮರಳಿ ಮೈಸೂರಿಗೆ ಬರಬೇಕಿತ್ತು.
 
ಆದರೆ ಪುರುಷರಿಗೆ ಕುಶಾಲನಗರದವರೆಗೆ ಮತ್ತು ಮಹಿಳೆಯರಿಗೆ ಪಿರಿಯಾಪಟ್ಟಣದವರೆಗೆ ಮಾತ್ರ ಸ್ಪರ್ಧೆ ನಡೆಸಲಾಯಿತು~  ಸ್ಪರ್ಧೆಯ ನಿರ್ಣಾಯಕರಾಗಿದ್ದ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯ ಮೂಲಗಳು ತಿಳಿಸಿವೆ.

`ಹವಾಮಾನ ವೈಪರಿತ್ಯದ ಕಾರಣದಿಂದ ಸ್ಪರ್ಧೆಯ ಅಂತರವನ್ನು ಮೊಟಕುಗೊಳಿಸಲಾಗಿದೆ~ ಎಂದು ಮೈಸೂರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ ತಿಳಿಸಿದ್ದಾರೆ.

ಫಲಿತಾಂಶ: ಪುರುಷರು (100 ಕಿ.ಮೀ): ಅಡಿವೆಪ್ಪ ಅವಟಿ (ಬಾಗಲಕೋಟೆ)-1, ಶ್ರೀಶೈಲ ಲಾಯಣ್ಣವರ (ಗದಗ)-2, ರಾಮಪ್ಪ ಅಂಬಿ (ವಿಜಾಪುರ)-3, ಸಿದ್ದಪ್ಪ ಕುರಣಿ -4, ರಮೇಶ್ ರಾಥೋಡ್ -5 (ವಿಜಾಪುರದವರು), ಸಂತೋಷ್ ಮಾನೆ (ಬಾಗಲಕೋಟೆ)-6, ಶಿವರಾಜ ಮಲ್ಲಿಗವಾಡ(ಗದಗ)-7, ವಿಠಲ್ ಹಳಬರ (ವಿಜಾಪುರ)-8. ವಿರೂಪಾಕ್ಷ ನಾಗನೂರ್ (ಬೆಳಗಾವಿ)-9, ಸಚಿನ್ ಕುರಿಯಾರ್ (ಬೆಳಗಾವಿ)-10.

ಮಹಿಳೆಯರು: ಶೈಲಾ ಮಟ್ಯಾಳ -1, ರಾಜೇಶ್ವರಿ ಡುಳ್ಳಿ-2 (ಬೆಳಗಾವಿಯವರು), ಫರಿಯಾಲ್ ಜಮಾದಾರ್ (ವಿಜಾಪುರ)-3, ಸೌಮ್ಯ ಅರಸ್ (ಮೈಸೂರು)-4, ದಾನಮ್ಮ ಬೆಚಕಂಡಿ -5, ಭಾಗ್ಯ ಮಸೂತಿ-6, ಕಾವೇರಿ ಮೊರನಾಳ -7, ದಾನಮ್ಮ ಗುರವ-8, ಮೀರಾ ಮೇಲನಕರ್- 9, ಸರೋಜ್ ಚೌಹಾಣ್ -10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT