ADVERTISEMENT

ರಾಮಚಂದ್ರನ್‌–ಬಾಕ್‌ ಭೇಟಿ

ಮಾರ್ಚ್‌ 26ಕ್ಕೆ ಲೂಸಾನ್‌ನಲ್ಲಿ...

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ/ ಐಎಎನ್‌ಎಸ್‌): ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ಮಹತ್ವದ ಬೆಳವಣಿಗೆಯೊಂದರಲ್ಲಿ  ಐಒಎಯ ಮುಂದಿನ ನಡೆಯ ಕುರಿತು ಚರ್ಚಿಸಲು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ಎನ್‌.ರಾಮಚಂದ್ರನ್‌ಗೆ  ಆಹ್ವಾನ ನೀಡಿದ್ದಾರೆ.

ಮಾರ್ಚ್‌ 26ರಂದು ಲುಸಾನ್‌ನಲ್ಲಿ ಇಬ್ಬರ ಭೇಟಿ ನಿಗದಿಯಾಗಿದೆ. ಹೀಗಾಗಿ  ಮಾರ್ಚ್‌ 27ರಂದು ನಡೆಯಬೇಕಿದ್ದ ಐಒಎ ಕಾರ್ಯ ಕಾರಿ ಮಂಡಳಿಯ ಮೊದಲ ಸಭೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಲಾಗಿದೆ.

ಐಒಸಿ ನೀಡಿದ್ದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಿಷೇಧ ಶಿಕ್ಷೆಯಿಂದ ಪಾರಾಗಿದ್ದ ಐಒಎ 14 ತಿಂಗಳ ಬಳಿಕ ಇತ್ತೀಚೆಗೆ ಮತ್ತೆ ಒಲಿಂಪಿಕ್‌ ಕುಟುಂಬಕ್ಕೆ ಮರಳಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ  ಐಒಸಿ ಮುಖ್ಯಸ್ಥ ಬಾಕ್‌ ಅವರು  ರಾಮಚಂದ್ರನ್‌ ಭೇಟಿಗೆ ಆಹ್ವಾನ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

‘ಮಾರ್ಚ್‌ 26ರಂದು ಲುಸಾನ್‌ನಲ್ಲಿ ನಿಗಧಿಯಾಗಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಐಒಸಿ ಮುಖ್ಯಸ್ಥ ಬಾಕ್‌ ಅವರು ನನಗೆ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ಐಒಎಯ ಮುಂದಿನ ಬೆಳವಣಿಗೆಗಳ ಕುರಿತು      ಚರ್ಚೆ ನಡೆಯಲಿದೆ’ ಎಂದು ರಾಮಚಂದ್ರನ್‌  ಮಂಗಳವಾರ ತಿಳಿಸಿದ್ದಾರೆ.

‘ಏಪ್ರಿಲ್‌ 3ರಂದು ನಡೆಯುವ ಐಒಎ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಐಒಸಿ ಮುಖ್ಯಸ್ಥರ  ಭೇಟಿಯ ಸಾರಾಂಶವನ್ನು ನಾನು ಸಭೆಗೆ ವಿವರಿಸಲಿದ್ದೇನೆ’   ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.