ADVERTISEMENT

ರಾಯಲ್ಸ್‌ಗೆ `ಪಂಚ್' ನೀಡಿದ ಫಿಂಚ್

ಪುಣೆ ವಾರಿಯರ್ಸ್ ತಂಡಕ್ಕೆ ಮೊದಲ ಗೆಲುವಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಪುಣೆ (ಪಿಟಿಐ): ಆ್ಯರನ್ ಫಿಂಚ್ (64) ಗಳಿಸಿದ ಅರ್ಧಶತಕದ ನೆರವಿನಿಂದ ಪುಣೆ ವಾರಿಯರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.

ಸುಬ್ರತಾ ರಾಯ್ ಸಹಾರ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ನಾಯಕತ್ವದ ಪುಣೆ ಏಳು ವಿಕೆಟ್‌ಗಳಿಂದ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿತು.

ವಾರಿಯರ್ಸ್ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರೆ, ರಾಯಲ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಹುಲ್ ದ್ರಾವಿಡ್ ನೇತೃತ್ವದ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 145 ರನ್ ಪೇರಿಸಿತು. ವಾರಿಯರ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 148 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಸಾಧಾರಣ ಗುರಿ ಬೆನ್ನಟ್ಟಿದ ವಾರಿಯರ್ಸ್‌ಗೆ ರಾಬಿನ್ ಉತ್ತಪ್ಪ (32, 16 ಎಸೆತ, 3 ಬೌಂ, 2 ಸಿಕ್ಸರ್) ಮತ್ತು ಫಿಂಚ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಇವರು 4.5 ಓವರ್‌ಗಳಲ್ಲಿ 58 ರನ್ ಸೇರಿಸಿದರು.

ಫಿಂಚ್ ಆ ಬಳಿಕ ರಾಸ್ ಟೇಲರ್ (17) ಅವರೊಂದಿಗೆ ಎರಡನೇ ವಿಕೆಟ್‌ಗೆ 48 ರನ್ ಕಲೆಹಾಕಿದರು. ಯುವರಾಜ್ ಸಿಂಗ್ (ಅಜೇಯ 28, 23 ಎಸೆತ, 2 ಸಿಕ್ಸರ್, 2 ಬೌಂ) ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು. 53 ಎಸೆತಗಳನ್ನು ಎದುರಿಸಿದ ಫಿಂಚ್ 6 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದರು.

ದ್ರಾವಿಡ್ ಅರ್ಧಶತಕ: ರಾಯಲ್ಸ್ ತಂಡವು ನಾಯಕ ರಾಹುಲ್ ದ್ರಾವಿಡ್ (54, 48 ಎಸೆತ, 8 ಬೌಂ) ಅವರ ಉಪಯುಕ್ತ ಆಟದ ನೆರವಿನಿಂದ ಸಾಧಾರಣ ಮೊತ್ತ ಕಲೆಹಾಕಿತ್ತು. ಈ ತಂಡದ ಆರಂಭ ಆಘಾತಕಾರಿಯಾಗಿತ್ತು. ಕುಸಾಲ್ ಪೆರೇರಾ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದರು. ದ್ರಾವಿಡ್ ಮತ್ತು ಅಜಿಂಕ್ಯ ರಹಾನೆ (30, 27 ಎಸೆತ) ಎರಡನೇ ವಿಕೆಟ್‌ಗೆ 81 ರನ್ ಸೇರಿಸಿದರು.

ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಲು ಆಗಲಿಲ್ಲ. ಬ್ರಾಡ್ ಹಾಡ್ಜ್ (22) ಮತ್ತು ಜೇಮ್ಸ ಫಾಲ್ಕನರ್ (19) ಅಜೇಯರಾಗಿ ಉಳಿದುಕೊಂಡರು. ವಾರಿಯರ್ಸ್ ಪರ ರಾಹುಲ್ ಶರ್ಮಾ (16ಕ್ಕೆ 2) ಮತ್ತು ಯುವರಾಜ್ ಸಿಂಗ್ (27ಕ್ಕೆ 2) ಗಮನ ಸೆಳೆದರು.

ರಾಜಸ್ತಾನ ರಾಯಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 145
ಕುಸಾಲ್ ಪೆರೇರಾ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ ಕುಮಾರ್ 00
ಅಜಿಂಕ್ಯ ರಹಾನೆ ಸಿ ಮ್ಯಾಥ್ಯೂಸ್ ಬಿ ರಾಹುಲ್ ಶರ್ಮಾ  30
ರಾಹುಲ್ ದ್ರಾವಿಡ್ ಸಿ ಟೇಲರ್ ಬಿ ಯುವರಾಜ್ ಸಿಂಗ್  54
ಸ್ಟುವರ್ಟ್ ಬಿನ್ನಿ ಸಿ ಮಾರ್ಷ್ ಬಿ ಯುವರಾಜ್ ಸಿಂಗ್ 01
ಬ್ರಾಡ್ ಹಾಡ್ಜ್ ಔಟಾಗದೆ  22
ದಿಶಾಂತ್ ಯಾಗ್ನಿಕ್ ಸಿ ಸುಮನ್ ಬಿ ರಾಹುಲ್ ಶರ್ಮಾ  12
ಜೇಮ್ಸ ಫಾಲ್ಕನರ್ ಔಟಾಗದೆ  19
ಇತರೆ: (ಲೆಗ್‌ಬೈ-3, ವೈಡ್-3, ನೋಬಾಲ್-1)  07
ವಿಕೆಟ್ ಪತನ: 1-0 (ಪೆರೇರಾ; 0.1), 2-81 (ರಹಾನೆ; 11.2), 3-85 (ಬಿನ್ನಿ; 12.2), 4-93 (ದ್ರಾವಿಡ್; 14.2), 5-106 (ಯಾಗ್ನಿಕ್; 15.5)
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-41-1, ಅಶೋಕ್ ದಿಂಡಾ 3-0-21-0, ಏಂಜೆಲೊ ಮ್ಯಾಥ್ಯೂಸ್ 4-0-27-0, ರಾಹುಲ್ ಶರ್ಮಾ 4-0-16-2, ಯುವರಾಜ್ ಸಿಂಗ್ 4-0-27-2, ಮಿಷೆಲ್ ಮಾರ್ಷ್ 1-0-10-0
ಪುಣೆ ವಾರಿಯರ್ಸ್: 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 148
ರಾಬಿನ್ ಉತ್ತಪ್ಪ ಸಿ ದ್ರಾವಿಡ್ ಬಿ ಜೇಮ್ಸ ಫಾಲ್ಕನರ್  32
ಆ್ಯರನ್ ಫಿಂಚ್ ಬಿ ಜೇಮ್ಸ ಫಾಲ್ಕನರ್  64
ರಾಸ್ ಟೇಲರ್ ಸಿ ಹಾಡ್ಜ್ ಬಿ ಹರ್ಮೀತ್ ಸಿಂಗ್  17
ಯುವರಾಜ್ ಸಿಂಗ್ ಔಟಾಗದೆ  28
ಏಂಜೆಲೊ ಮ್ಯಾಥ್ಯೂಸ್ ಔಟಾಗದೆ  01
ಇತರೆ: (ಲೆಗ್‌ಬೈ-2, ವೈಡ್-3, ನೋಬಾಲ್-1)  06
ವಿಕೆಟ್ ಪತನ: 1-58 (ರಾಬಿನ್; 4.5), 2-104 (ಟೇಲರ್; 11.6), 3-131 (ಫಿಂಚ್; 16.6)
ಬೌಲಿಂಗ್: ಹರ್ಮೀತ್ ಸಿಂಗ್ 4-0-34-1, ಎಸ್. ಶ್ರೀಶಾಂತ್ 2.4-0-38-0, ಜೇಮ್ಸ ಫಾಲ್ಕನರ್ 4-0-17-2, ಕೆವೊನ್ ಕೂಪರ್ 4-0-26-0, ಸಿದ್ಧಾರ್ಥ್ ತ್ರಿವೇದಿ 4-0-31-0
ಫಲಿತಾಂಶ: ಪುಣೆ ವಾರಿಯರ್ಸ್‌ಗೆ 7 ವಿಕೆಟ್ ಗೆಲುವು, ಪಂದ್ಯಶ್ರೇಷ್ಠ: ಆ್ಯರನ್ ಫಿಂಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT