ADVERTISEMENT

ರಾಸ್‌ ಟೇಲರ್‌ ಅಮೋಘ ಶತಕ

ಎರಡನೇ ಟೆಸ್ಟ್‌ ಪಂದ್ಯ: ಸೋಲಿನ ಭೀತಿಯಲ್ಲಿ ವೆಸ್ಟ್‌ ಇಂಡೀಸ್‌

ಏಜೆನ್ಸೀಸ್
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್‌ ತಂಡದ ರಾಸ್‌ ಟೇಲರ್‌ ಬ್ಯಾಟಿಂಗ್‌ ವೈಖರಿ. –ಎಎಫ್‌ಪಿ ಚಿತ್ರ
ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್‌ ತಂಡದ ರಾಸ್‌ ಟೇಲರ್‌ ಬ್ಯಾಟಿಂಗ್‌ ವೈಖರಿ. –ಎಎಫ್‌ಪಿ ಚಿತ್ರ   

ಹ್ಯಾಮಿಲ್ಟನ್‌: ರಾಸ್‌ ಟೇಲರ್‌ (ಔಟಾಗದೆ 107; 198ಎ, 11ಬೌಂ) ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮುನ್ನಡೆ ಗಳಿಸಿದೆ.

ಸೆಡಾನ್‌ ಪಾರ್ಕ್‌ ಅಂಗಳ ದಲ್ಲಿ 8 ವಿಕೆಟ್‌ಗೆ 215ರನ್‌ ಗಳಿಂದ ಸೋಮವಾರ ಆಟ ಆರಂಭಿಸಿದ ವೆಸ್ಟ್‌ ಇಂಡೀಸ್‌, ಮೊದಲ ಇನಿಂಗ್ಸ್‌ನಲ್ಲಿ 66.5 ಓವರ್‌ಗಳಲ್ಲಿ 221ರನ್‌ಗಳಿಗೆ ಆಲೌಟ್‌ ಆಯಿತು.

ದ್ವಿತೀಯ ಇನಿಂಗ್ಸ್‌ ಶುರು ಮಾಡಿದ ಕಿವೀಸ್‌ ನಾಡಿನ ತಂಡ 77.4 ಓವರ್‌ಗಳಲ್ಲಿ 8 ವಿಕೆಟ್‌ಗೆ 291 ರನ್‌ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.