ADVERTISEMENT

ರಾಹುಲ್‌, ಗೇಲ್‌ ಭರ್ಜರಿ ಬ್ಯಾಟಿಂಗ್‌: ಕೆಕೆಆರ್‌ ವಿರುದ್ಧ ಪಂಜಾಬ್‌ಗೆ 9 ವಿಕೆಟ್‌ ಜಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 15:49 IST
Last Updated 21 ಏಪ್ರಿಲ್ 2018, 15:49 IST
ಕ್ರಿಸ್ ಗೇಲ್ ಬ್ಯಾಟಿಂಗ್‌ ವೈಖರಿ. (ಸಂಗ್ರಹ ಚಿತ್ರ).
ಕ್ರಿಸ್ ಗೇಲ್ ಬ್ಯಾಟಿಂಗ್‌ ವೈಖರಿ. (ಸಂಗ್ರಹ ಚಿತ್ರ).   

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ನಡೆದ ಐಪಿಎಲ್‌ನ 18ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಕಿಂಗ್ಸ್ ಇಲೆವನ್‌ ಪಂಜಾಬ್ 9 ವಿಕೆಟ್‌ ಜಯ ಸಾಧಿಸಿದೆ.

ಕೆಕೆಆರ್‌ ಎದುರು ಟಾಸ್‌ ಗೆದ್ದ ಪಂಜಾಬ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟಿಂಗ್‌ ಆರಂಭಿಸಿದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತು(ಕ್ರಿಸ್‌ ಲಿನ್‌ 74, ರಾಬಿನ್‌ ಉತ್ತಪ್ಪ 34, ದಿನೇಶ್‌ ಕಾರ್ತಿಕ್‌ 43).

ADVERTISEMENT

ಮಳೆ ಬಂದ ಪರಿಣಾಮ ಪಂದ್ಯವನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಲಾಗಿತು. ಆಗ ಡಕ್ವರ್ಥ್ ಲೂಯಿಸ್‌ ನಿಯಮವನ್ನು ಅನ್ವಯಿಸಲಾಯಿತು. ಅದರ ಪ್ರಕಾರ ಪಂಜಾಬ್‌ ತಂಡದ ಗೆಲುವಿಗೆ 13 ಓವರ್‌ಗಳಲ್ಲಿ 125 ರನ್‌ಗಳ ಗುರಿ ನಿಗದಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.