ಹುಬ್ಬಳ್ಳಿ: ರೈಸಿಂಗ್ ಸ್ಟಾರ್ಸ್ ಹುಬ್ಬಳ್ಳಿ ತಂಡವು ಮೊದಲ ಜೂನಿಯರ್ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಟೂರ್ನಿಯ ಫೈನಲ್‌ನಲ್ಲಿ ಟ್ವಿನ್ ಸಿಟಿ ಚಾಲೆಂಜರ್ಸ್ ಎದುರು ಏಳು ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿ ಗಳಿಸಿತು.
ರಾಜನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟ್ವಿನ್ ಸಿಟಿ ತಂಡ 30 ಓವರ್‌ಗಳಲ್ಲಿ ಮೂರು ವಿಕೆಟ್ ಈ ಕಳೆದುಕೊಂಡು 156 ರನ್ ಗಳಿಸಿತ್ತು. ಗುರಿಯನ್ನು ರೈಸಿಂಗ್ ಸ್ಟಾರ್ಸ್ ತಂಡವು 26.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿತು.
14 ವರ್ಷದ ಒಳಗಿನ ಆಟಗಾರರಿಗೆ ನಡೆದ ಜೂನಿಯರ್ ಲೀಗ್‌ನಲ್ಲಿ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಧಾರವಾಡ ವಲಯದ ಐದು ಜಿಲ್ಲೆಗಳ ಆಟಗಾರರು ಭಾಗಿಯಾಗಿದ್ದರು.
ಸಂಕ್ಷಿಪ್ತ ಸ್ಕೋರು: ಟ್ವಿನ್ ಸಿಟಿ ಚಾಲೆಂಜರ್ಸ್ 30 ಓವರ್‌ಗಳಲ್ಲಿ 156ಕ್ಕೆ3 (ಕೇದಾರ ಉಸುಲಕರ 64, ಅನೀಶ್ ಭೂಸದ ಔಟಾಗದೆ 58; ಆದಿತ್ಯ ಹಿರೇಮಠ 27ಕ್ಕೆ2). ರೈಸಿಂಗ್ ಸ್ಟಾರ್ಸ್ ಹುಬ್ಬಳ್ಳಿ 26.5 ಓವರ್‌ಗಳಲ್ಲಿ 163ಕ್ಕೆ3 (ರೋಹನ್ ಯರೆಸೀಮಿ 76, ಆದಿತ್ಯ ಹಿರೇಮಠ ಔಟಾಗದೆ 57; ಕೇದಾರ ಉಸುಲಕರ 21ಕ್ಕೆ1, ತರುಣ್ ಹಿರೇಮಠ 22ಕ್ಕೆ1).
ಫಲಿತಾಂಶ: ರೈಸಿಂಗ್ ಸ್ಟಾರ್ಸ್ ತಂಡಕ್ಕೆ 7 ವಿಕೆಟ್ ಗೆಲುವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.