ADVERTISEMENT

ರ‍್ಯಾಂಕಿಂಗ್‌: 12ನೇ ಸ್ಥಾನದಲ್ಲಿ ಪ್ರಣಯ್‌

ಪಿಟಿಐ
Published 22 ಮಾರ್ಚ್ 2018, 19:41 IST
Last Updated 22 ಮಾರ್ಚ್ 2018, 19:41 IST
ರ‍್ಯಾಂಕಿಂಗ್‌: 12ನೇ  ಸ್ಥಾನದಲ್ಲಿ ಪ್ರಣಯ್‌
ರ‍್ಯಾಂಕಿಂಗ್‌: 12ನೇ ಸ್ಥಾನದಲ್ಲಿ ಪ್ರಣಯ್‌   

ನವದೆಹಲಿ: ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ತಲುಪಿದ್ದ ಭಾರತದ ಆಟಗಾರ ಎಚ್‌.ಎಸ್‌. ಪ್ರಣಯ್‌ ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನಕ್ಕೆ ಏರಿದ್ದಾರೆ.

ಹೋದ ವರ್ಷ ಪ್ರಣಯ್‌ 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ರ‍್ಯಾಂಕಿಂಗ್‌ನಲ್ಲಿ ಕುಸಿತ ಅನುಭವಿಸಿದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ 20ನೇ ಸ್ಥಾನಕ್ಕೆ ಏರಿದೆ. ಈ ಜೋಡಿ ಕೂಡ ಆಲ್‌ ಇಂಗ್ಲೆಂಡ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು.

ಪ್ರೀ ಕ್ವಾರ್ಟರ್‌ನಲ್ಲಿ ಆಡಿದ್ದ ಕಿದಂಬಿ ಶ್ರೀಕಾಂತ್‌ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ್ದ ಪಿ.ವಿ ಸಿಂಧು ಹಾಗೂ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದ್ದ ಸೈನಾ ನೆಹ್ವಾಲ್‌ ಕ್ರಮವಾಗಿ ಮೂರು ಮತ್ತು 12ನೇ ಸ್ಥಾನದಲ್ಲಿಯೇ ಇದ್ದಾರೆ.

ADVERTISEMENT

ಮೊದಲ ಸುತ್ತಿನಲ್ಲಿ ಸೋತಿದ್ದ ಸಾಯಿ ಪ್ರಣೀತ್‌ 15ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ  24ನೇ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.