ADVERTISEMENT

ಲಲಿತ್‌ ಮೋದಿ ನಾಮಪತ್ರ

ರಾಜಸ್ತಾನ ಕ್ರಿಕೆಟ್ ಸಂಸ್ಥೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಜೈಪುರ (ಪಿಟಿಐ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ  (ಬಿಸಿ ಸಿಐ) ಆಜೀವ ನಿಷೇಧಕ್ಕೆ ಒಳಗಾಗಿ ರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಮೋದಿ ನಾಮಪತ್ರ ಸಲ್ಲಿಕೆಯ ಬೆನ್ನಲ್ಲೇ    ಬಿಸಿಸಿಐ, ರಾಜಸ್ತಾನ  ಕ್ರಿಕೆಟ್ ಸಂಸ್ಥೆಯನ್ನು ಅಮಾನತುಗೊಳಿ ಸುವ ಬೆದರಿಕೆ ಹಾಕಿದೆ. ಈ ತಿಂಗಳ 19 ರಂದು ಆರ್‌ಸಿಎ ಚುನಾವಣೆ ನಡೆಯ ಲಿದ್ದು, ಮೋದಿ ಅವರು ತಮ್ಮ ವಕೀಲ ಮೆಹ್ಮೂದ್ ಆಬ್ದಿ ಸಹಾಯದೊಂದಿಗೆ ನಾಮಪತ್ರವನ್ನು  ಆರ್‌ಸಿಎ ಅಧ್ಯಕ್ಷರಿಗೆ ಅಂಚೆ ಮೂಲಕ  ರವಾನಿಸಿದ್ದಾರೆ. ಮಂಗಳವಾರ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಬುಧವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.

‘ನಾಗಾವರ್ ಕ್ರಿಕೆಟ್ ಸಂಸ್ಥೆ ಮೋದಿ ಯವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಅವಕಾಶ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಬಿಸಿಸಿಐ ನಿಯಮ ದಂತೆ ಆರ್‌ಸಿಎ ಒಳಗೊಂಡು ಎಲ್ಲಾ ಸದಸ್ಯರು ಸಂಸ್ಥೆ ಕೈಗೊಂಡ ತೀರ್ಮಾನ ಮತ್ತು ನಿರ್ದೇಶನಗಳನ್ನು ಪಾಲಿಸಬೇಕು ಎಂಬುದನ್ನು ನಿಮ್ಮ ಗಮನಕ್ಕೆ ತರ ಬಯ ಸುತ್ತೇನೆ’ ಎಂದು ಬಿಸಿಸಿಐ ಕಾರ್ಯ ದರ್ಶಿ ಸಂಜಯ್ ಪಟೇಲ್ ಆರ್‌ಸಿಎ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಆರ್ ಸಿಎ ಬಿಸಿಸಿಐನ ಮಾನ್ಯತೆ ಪಡೆದಿದ್ದು, ಒಂದು ವೇಳೆ ಮೋದಿ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿ ದರೂ ಮಾನ್ಯತೆಯನ್ನು ರದ್ದುಗೊಳಿಸ ಲಾಗುತ್ತದೆ. ಇದರೊಂದಿಗೆ ಬಿಸಿಸಿಐ ನೀಡುತ್ತಿರುವ ನೆರವಿನಿಂದಲೂ ಅದು ವಂಚಿತವಾಗಲಿದೆ. ಹೀಗಾಗಿ ತನ್ನ ನಿರ್ದೇಶನವನ್ನು ಕೂಡಲೇ ಪಾಲಿಸಬೇಕು’ ಎಂದು ಎಚ್ಚರಿಸಿದ್ದಾರೆ.

ಚುನಾವಣೆಯಲ್ಲಿ ಮೋದಿ ವಿರುದ್ಧವಾಗಿ ಯಾರೂ ಸ್ಪರ್ಧಿಸುತ್ತಿಲ್ಲ. ಜೊತೆಗೆ ಒಟ್ಟು 33 ಜಿಲ್ಲಾ ಕ್ರಿಕೆಟ್ ಘಟಕಗಳಲ್ಲಿ 24 ಘಟಕಗಳು ಮೋದಿಗೆ ಬೆಂಬಲ ಸೂಚಿಸಿವೆ. ಹೀಗಾಗಿ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಐಪಿಎಲ್‌ನಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆಸಿದ್ದಾರೆ ಎಂದು ಬಿಸಿಸಿಐ ಕ್ರಿಕೆಟ್ ಚಟುವಟಿಕೆಗಳಿಂದ ಮೋದಿ ಅವರನ್ನು ದೂರ ಇಡಲು ಅವರ  ಮೇಲೆ ಆಜೀವ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.