ADVERTISEMENT

ವರುಣ್ ಆ್ಯರನ್ ಬದಲಿಗೆ ಬೆನ್ ರೊಹ್ರರ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:29 IST
Last Updated 3 ಏಪ್ರಿಲ್ 2013, 19:29 IST

ನವದೆಹಲಿ: ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ವರುಣ್ ಆ್ಯರನ್ ಬದಲಿಗೆ ಆಸ್ಟ್ರೇಲಿಯಾದ ಬೆನ್ ರೊಹ್ರರ್ ಅವರೊಂದಿಗೆ ಡೆಲ್ಲಿ ಡೇರ್‌ಡೆವಿಲ್ಸ್ ಒಪ್ಪಂದ ಮಾಡಿಕೊಂಡಿದೆ.

ರೊಹ್ರರ್ ನ್ಯೂ ಸೌತ್ ವೇಲ್ಸ್ ತಂಡದ ನಾಯಕ ಹಾಗೂ ಎಡಗೈ ಬ್ಯಾಟ್ಸ್‌ಮನ್. ಆಸ್ಟ್ರೇಲಿಯಾದ ದೇಶಿ ಟೂರ್ನಿ ಬಿಗ್ ಬಾಷ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 32 ವರ್ಷ ವಯಸ್ಸಿನ ಈ ಆಟಗಾರ 49.16 ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ.

`ಡೇರ್‌ಡೆವಿಲ್ಸ್ ತಂಡದಲ್ಲಿ ಆಡಲು ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದು ರೊಹ್ರರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.