ಬೆಂಗಳೂರು: ಕರುಣ್ ನಾಯರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ವಲ್ಚರ್ರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ನಡೆದ ವೈಎಸ್‌ಆರ್ ಟೂರ್ನಿಯಲ್ಲಿ ಜವಾಹರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 122 ರನ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವಲ್ಚರ್ಸ್ ಕ್ಲಬ್ ತಂಡ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿತು. ಈ ಸವಾಲಿಗೆ ಉತ್ತರ ನೀಡುವಲ್ಲಿ ಎಡವಿದ ಜವಾಹರ ಸ್ಪೋರ್ಟ್ಸ್ ಕ್ಲಬ್ 32.1 ಓವರ್‌ಗಳಲ್ಲಿ 168 ರನ್ ಗಳಿಸಿ ಆಲ್‌ಔಟ್ ಆಯಿತು.
ಕರುಣ್ ನಾಯರ್ 111 ಎಸೆತಗಳಲ್ಲಿ 11 ಭರ್ಜರಿ ಬೌಂಡರಿ ಸೇರಿದಂತೆ ಗಳಿಸಿದ 89 ರನ್ ಹಾಗೂ ಉತ್ತಮ ಬೌಲಿಂಗ್ (43ಕ್ಕೆ3) ಮಾಡಿ ಆಲ್‌ರೌಂಡ್ ಪ್ರದರ್ಶನ ತೋರಿದರು.
ಸಂಕ್ಷಿಪ್ತ ಸ್ಕೋರ್: ವಲ್ಚರ್ಸ್ ಕ್ರಿಕೆಟ್ ಕ್ಲಬ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 290. (ಕರುಣ್ ನಾಯರ್ 89, ಕೆ.ಎಲ್. ರಾಹುಲ್ 87, ಪವನ್ ದೇಶಪಾಂಡೆ 21; ಸುನಿಲ್ ಕುಮಾರ್ ಡಿ.ಎಚ್ 54ಕ್ಕೆ2, ಎಸ್. ಸಂಜಯ್ ಕುಮಾರ್ 42ಕ್ಕೆ2).ಜವಾಹರ ಸ್ಪೋಟ್ಸ್ ಕ್ಲಬ್: 32.1 ಓವರ್‌ಗಳಲ್ಲಿ 168. (ಅಶ್ವತ್ಥ್ ಅಯ್ಯಪ್ಪ 24, ಸಿ.ಬಿ. ಕಾರ್ತಿಕ್ 37, ನರೇಶ್ ರೆಡ್ಡಿ 25; ಕರುಣ್ ನಾಯರ್ 43ಕ್ಕೆ3, ಎಸ್.ಕೆ. ಮೈನುದ್ದೀನ್ 32ಕ್ಕೆ4.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.