ADVERTISEMENT

ವಾರ್ನರ್‌ ಪ್ರಕರಣ ತನಿಖೆಗೆ

ಏಜೆನ್ಸೀಸ್
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಡೇವಿಡ್‌ ವಾರ್ನರ್‌ (ಸಂಗ್ರಹ ಚಿತ್ರ).
ಡೇವಿಡ್‌ ವಾರ್ನರ್‌ (ಸಂಗ್ರಹ ಚಿತ್ರ).   

ಡರ್ಬನ್‌: ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ನಡುವಣ ನಿಂದನೆ ಪ್ರಕರಣದ ತನಿಖೆ ನಡೆಸುವುದಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ.

ಕಿಂಗ್ಸ್‌ಮೇಡ್‌ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ಚಹಾ ವಿರಾಮಕ್ಕೆ ಆಟಗಾರರು ಡ್ರೆಸಿಂಗ್‌ ಕೊಠಡಿಗೆ ಹೋಗುವಾಗ ವಾರ್ನರ್‌, ಡಿ ಕಾಕ್‌ ಅವರನ್ನು ಕೆಣಕಿದ್ದಾರೆ. ಆಗ ಡಿ ಕಾಕ್‌, ವಾರ್ನರ್‌ ಅವರನ್ನು ಅಣಕಿಸಿದ್ದಾರೆ. ಬಳಿಕ ಇಬ್ಬರ ನಡುವೆಯೂ ಕೆಲಕಾಲ ವಾಗ್ವಾದ ನಡೆದಿದೆ.

ನಂತರ ಉಸ್ಮಾನ್‌ ಖವಾಜ ಮತ್ತು ನೇಥನ್‌ ಲಿಯೊನ್‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ADVERTISEMENT

ಪಂದ್ಯದ ವೇಳೆ ವಾರ್ನರ್‌, ಡಿ ಕಾಕ್‌ ಅವರನ್ನು ಕೆಣಕಿರಬಹುದು. ಇದಕ್ಕೆ ಡಿ ಕಾಕ್‌ ತಕ್ಕ ಪ್ರತ್ಯುತ್ತರ ನೀಡಿರುತ್ತಾರೆ. ಅದು ಅವರ ಸ್ವಭಾವ. ಪ್ರಕರಣದ ತನಿಖೆ ನಡೆಯುತ್ತಿದ್ದು ಯಾರು ತಪ್ಪು ಮಾಡಿದ್ದಾರೆ ಎಂಬುದು ಶೀಘ್ರವೇ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಪಂದ್ಯದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್‌ ಮಹಮ್ಮದ್‌ ಮೂಸಾಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.