ಇಂದೋರ್ (ಪಿಟಿಐ): ಶಹಬಾಜ್ ನದೀಮ್ (6ಕ್ಕೆ 4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಜಾರ್ಖಂಡ್ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ 159 ರನ್‌ಗಳಿಂದ ಗುಜರಾತ್ ವಿರುದ್ಧ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255 ರನ್ ಪೇರಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್ ತಂಡ ನದೀಮ್ ಅವರ ಮಾರಕ ಬೌಲಿಂಗ್ ಮುಂದೆ ಪರದಾಟ ನಡೆಸಿ 96 ರನ್‌ಗಳಿಗೆ ಆಲೌಟಾಯಿತು. ನೀರಜ್ ಪಟೇಲ್ (ಔಟಾಗದೆ 46) ಮತ್ತು ಮನ್‌ಪ್ರೀತ್ ಜುನೇಜಾ (28) ಮಾತ್ರ ಎರಡಂಕಿಯ ಮೊತ್ತ ತಲುಪಿದರು.
ಇದಕ್ಕೂ ಮೊದಲು ಇಶಾಂಕ್ ಜಗ್ಗಿ (58) ಹಾಗೂ ಕುಮಾರ್ ದೇವ್‌ರಥ್ (52) ಅವರ ಅರ್ಧಶತಕದ ನೆರವಿನಿಂದ ಜಾರ್ಖಂಡ್ ತಂಡ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್: ಜಾರ್ಖಂಡ್: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255 (ಇಶಾಂಕ್ ಜಗ್ಗಿ 58, ಕುಮಾರ್ ದೇವ್‌ರಥ್ 52, ಶಿವ ಗೌತಮ್ ಔಟಾಗದೆ 35, ಸಲೀಲ್ ಯಾದವ್ 28ಕ್ಕೆ 1). ಗುಜರಾತ್ 24 ಓವರ್‌ಗಳಲ್ಲಿ 96 (ನೀರಜ್ ಪಟೇಲ್ ಔಟಾಗದೆ 46, ಮನ್‌ಪ್ರೀತ್ ಜುನೇಜಾ 28, ಶಹಬಾಜ್ ನದೀಮ್ 6ಕ್ಕೆ 4).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.