ADVERTISEMENT

ವಿಟಿಯು ಅಂತರ ಕಾಲೇಜು ಅಥ್ಲೆಟಿಕ್ಸ್ : ಹರ್ಷಿತ್, ಎಲಿಜಬೆತ್ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST
ವಿಟಿಯು ಅಂತರ ಕಾಲೇಜು ಅಥ್ಲೆಟಿಕ್ಸ್ : ಹರ್ಷಿತ್, ಎಲಿಜಬೆತ್ ಕೂಟ ದಾಖಲೆ
ವಿಟಿಯು ಅಂತರ ಕಾಲೇಜು ಅಥ್ಲೆಟಿಕ್ಸ್ : ಹರ್ಷಿತ್, ಎಲಿಜಬೆತ್ ಕೂಟ ದಾಖಲೆ   

ತುಮಕೂರು: ನಗರದ ಸಿದ್ದಗಂಗಾ ಎಂಜಿನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ 15ನೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಅಂತರಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಎರಡು ಕೂಟ ದಾಖಲೆಗಳು ಮೂಡಿಬಂದವು.

ಪುರುಷರ ಎತ್ತರ ಜಿಗಿತದಲ್ಲಿ ಬೆಂಗಳೂರಿನ ಈಸ್ಟ್‌ವೆಸ್ಟ್ ಕಾಲೇಜಿನ ಎಸ್.ಹರ್ಷಿತ್ (2.05 ಮೀ.) ಮತ್ತು ಮಹಿಳೆಯರ ಶಾಟ್‌ಪಟ್‌ನಲ್ಲಿ ಮಂಗಳೂರಿನ ಎಲಿಜಬೆತ್ ಚೆರಿಯನ್ (10.68 ಮೀ.) ದಾಖಲೆ ನಿರ್ಮಿಸಿದರು.

ಮೊದಲ ದಿನದ ಫಲಿತಾಂಶ:
ಪುರುಷರ ವಿಭಾಗ :20 ಕಿ.ಮೀ. ನಡಿಗೆ- ಜಿತೇಂದ್ರಕುಮಾರ್ (ಎಪಿಎಸ್ ಕಾಲೇಜು, ಬೆಂಗಳೂರು)-1, ಸಿ.ಸಚಿನ್ (ರೇವಾ ಕಾಲೇಜು, ಬೆಂಗಳೂರು) -2, ಜಿಬಿನ್ ಮ್ಯಾಥ್ಯು (ರಾಜೀವ್ ಕಾಲೇಜು, ಹಾಸನ) -3, ಡಿಸ್ಕಸ್ ಎಸೆತ- ಆ್ಯಸ್ಟನ್ ಡಬ್ಲ್ಯು ಕೊಯಿಲೊ (ಸಹ್ಯಾದ್ರಿ ಕಾಲೇಜು, ಮಂಗಳೂರು)-1, ಪ್ರಣವ್ ಶ್ರೀಧರನ್ (ಕೆನರಾ ಕಾಲೇಜು, ಮಂಗಳೂರು)-2, ಟಿ.ಮನೋಜ್‌ಕುಮಾರ್ (ಸೆಂಟ್‌ಜೋಸೆಫ್ ಕಾಲೇಜು, ಮಂಗಳೂರು)-3,ಹೈಜಂಪ್- ಎಸ್.ಹರ್ಷಿತ್ (ಈಸ್ಟ್‌ವೆಸ್ಟ್ ಕಾಲೇಜು, ಬೆಂಗಳೂರು)-1, ಸಚಿನ್‌ಕುಮಾರ್ (ಎನ್‌ಎಂಎಐಟಿ, ಮಂಗಳೂರು) -2, ತ್ರಿಶಾಂತ್‌ರಾಯ್ (ಕೆವಿಜಿ ಕಾಲೇಜು, ಸುಳ್ಯ) -3, ಲಾಂಗ್‌ಜಂಪ್- ಮಹಮದ್ ಷಕೀರ್ (ಎಸ್‌ಡಿಎಂ ಕಾಲೇಜು, ಉಜಿರೆ) -1, ಚಿನ್ನೇಶ್ (ಯಗಚಿ ಕಾಲೇಜು, ಹಾಸನ) -2, ಸಯದ್ ಅಬ್ದುಲ್ ಸಮಾದ್ (ಎಚ್‌ಕೆಬಿಕೆ ಕಾಲೇಜು, ಬೆಂಗಳೂರು) -3, ಶಾಟ್‌ಪಟ್- ಆ್ಯಸ್ಟನ್ ಡಬ್ಲ್ಯು ಕೊಯಿಲೊ (ಸಹ್ಯಾದ್ರಿ ಕಾಲೇಜು, ಮಂಗಳೂರು) -1, ವಿ.ಎಸ್.ಅವಿನಾಶ್ (ಬಿಎಂಎಸ್‌ಐಟಿ, ಬೆಂಗಳೂರು) -2, ಮಹೇಂದ್ರ ಪಲ್ಲವ (ಎಂಎಸ್‌ಆರ್‌ಐಟಿ, ಬೆಂಗಳೂರು) -3.

ಮಹಿಳೆಯರ ವಿಭಾಗ: 1500 ಮೀ. ಓಟ- ಕೆ.ಸಿ.ಮಮತಾ (ಆಳ್ವಾಸ್ ಕಾಲೇಜು, ಮೂಡುಬಿದರೆ)-1, ಎನ್.ಹರ್ಷಿತಾ (ಎಚ್‌ಕೆಬಿಕೆ ಕಾಲೇಜು, ಬೆಂಗಳೂರು) -2, ಅರ್ಚನಾ ಸುರೆಗಾಂವಕರ್ (ಎಂಎಸ್‌ಆರ್‌ಐಟಿ, ಬೆಂಗಳೂರು) -3, 5 ಕಿ.ಮೀ. ನಡಿಗೆ- ಡಿ.ಲತಾ (ವಿವೇಕಾನಂದ ಕಾಲೇಜು, ಪುತ್ತೂರು) -1, ಎಸ್.ಎನ್.ದೀಪಾ (ಆಕ್ಸ್‌ಫರ್ಡ್ ಕಾಲೇಜು, ಬೆಂಗಳೂರು)-2, ದಿವ್ಯಾರವಿಶಂಕರ್ (ಎಂಎಸ್‌ಆರ್‌ಐಟಿ, ಬೆಂಗಳೂರು) -3, ಡಿಸ್ಕಸ್ ಎಸೆತ- ಎಲಿಜಬತ್ ಚೆರಿಯನ್ (ಸೇಂಟ್ ಜೊಸೆಫ್ಸ್ ಕಾಲೇಜು, ಮಂಗಳೂರು) -1, ಹಿಮಾನಿ ಪಿ.ಹೆಗ್ಡೆ (ಎನ್‌ಎಂಎಐಟಿ, ಮಂಗಳೂರು) -2, ಬಿ.ಅಶ್ವಿನಿಕುಮಾರಿ (ಸಹ್ಯಾದ್ರಿ ಕಾಲೇಜು, ಮಂಗಳೂರು)-3, ಹೈಜಂಪ್- ಪಿ.ಜೆ.ಸ್ನೇಹ (ಡಾನ್‌ಬಾಸ್ಕೋ ಕಾಲೇಜು, ಬೆಂಗಳೂರು) -1, ಕ್ಯಾರೋಲ್ ರೆಯೋನಾಮಾಂಟೆರಿಯೋ (ಸಹ್ಯಾದ್ರಿ ಕಾಲೇಜು, ಮಂಗಳೂರು) -2, ಶಿವರಂಜನಿ (ಶ್ರೀನಿವಾಸ ಕಾಲೇಜು, ಮಂಗಳೂರು) -3, ಲಾಂಗ್‌ಜಂಪ್- ನಿಶಾ ಪ್ರಕಾಶ್ (ಎಂಎಸ್‌ಆರ್‌ಐಟಿ, ಬೆಂಗಳೂರು) -1, ಪಿ.ಜೆ.ಸ್ನೇಹಾ (ಡಾನ್‌ಬಾಸ್ಕೋ ಕಾಲೇಜು, ಬೆಂಗಳೂರು) -2, ಮ್ಯಾವಿಸ್ ಮೋನಿಕಾ ಡಿ~ಸಿಲ್ವಾ (ಕೆನರಾ ಕಾಲೇಜು, ಮಂಗಳೂರು) -3, ಶಾಟ್‌ಪಟ್- ಎಲಿಜಬತ್ ಚೆರಿಯನ್ (ಸೇಂಟ್ ಜೋಸೆಫ್ ಕಾಲೇಜು, ಮಂಗಳೂರು) -1, ಈ.ಕೃತಿ (ಬಿಐಟಿ, ಬೆಂಗಳೂರು) -2, ಶೃತಿ ಶ್ರೀಧರ್‌ಶೆಟ್ಟಿ (ಆಳ್ವಾಸ್ ಕಾಲೇಜು,        ಮೂಡುಬಿದ್ರಿ) -3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.