ADVERTISEMENT

ವಿದಾಯ ಹೇಳಲು ಜೋಶಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST
ವಿದಾಯ ಹೇಳಲು ಜೋಶಿ ನಿರ್ಧಾರ
ವಿದಾಯ ಹೇಳಲು ಜೋಶಿ ನಿರ್ಧಾರ   

ಬೆಂಗಳೂರು: ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಅಂತರರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

`ಜೂನ್ 21ರಂದು ಸಂಜೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೋಶಿ ವಿದಾಯದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ~ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.

15 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿರುವ ಜೋಶಿ 35.85 ಸರಾಸರಿಯಲ್ಲಿ 41 ವಿಕೆಟ್ ಪಡೆದಿದ್ದಾರೆ. 2000ರಲ್ಲಿ ನಾಗಪುರದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯ ಅವರ ಪಾಲಿಗೆ ಕೊನೆಯ ಟೆಸ್ಟ್. 69 ಏಕದಿನ ಪಂದ್ಯಗಳಿಂದ 69 ವಿಕೆಟ್ ಕಬಳಿಸಿದ್ದಾರೆ. 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಆರು ರನ್ ನೀಡಿ ಐದು ವಿಕೆಟ್ (10-6-6-5)  ಪಡೆದ್ದ್ದಿದ ಅವರ ಸಾಧನೆ ವಿಸ್ಡನ್ ಶ್ರೇಷ್ಠ ಸಾಧನೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

42  ವರ್ಷ ವಯಸ್ಸಿನ ಜೋಶಿ ಈಗ ಹೈದರಾಬಾದ್ ರಣಜಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 160 ಪ್ರಥಮ ದರ್ಜೆ ಪಂದ್ಯಗಳಿಂದ 615 ವಿಕೆಟ್ ಪಡೆದಿದ್ದಾರೆ. ಉಪಯುಕ್ತ ಬ್ಯಾಟ್ಸ್‌ಮನ್ ಕೂಡ ಆಗಿದ್ದ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15450 ರನ್ ಗಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.