ADVERTISEMENT

ವಿಶ್ವಕಪ್‌: ಭಾರತದ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 10:46 IST
Last Updated 28 ಫೆಬ್ರುವರಿ 2015, 10:46 IST
ಪರ್ತ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಟದ ವೈಖರಿ    –ಎಎಫ್‌ಪಿ ಚಿತ್ರ
ಪರ್ತ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಟದ ವೈಖರಿ –ಎಎಫ್‌ಪಿ ಚಿತ್ರ   

ಪರ್ತ್‌: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಭಾರತ– ಯುಎಇ ನಡುವಿನ ಪಂದ್ಯದಲ್ಲಿ ಗೆಲುವಿನ ಬೆನ್ನತ್ತಿರುವ ಭಾರತ ತಂಡ ಭೋಜನ ವಿರಾಮದ ಹೊತ್ತಿಗೆ 16 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 88 ರನ್‌ ಕಲೆ ಹಾಕಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಯುಎಇ ತಂಡ 31.3 ಓವರ್‌ಗಳಲ್ಲಿ 102 ರನ್‌ಗಳಿಸಿ ಆಲೌಟ್‌ ಆಗಿದೆ. ಆರಂಭಿಕ ಆಟಗಾರರಾಗಿ ರೋಹಿತ್‌ ಶರ್ಮ ಜತೆಗೆ ಮೈದಾನಕ್ಕಿಳಿದ ಶಿಖರ್‌ ಧವನ್‌ 14 ರನ್‌ ಗಳಿಸಿ ಮೊಹಮ್ಮದ್‌ ನವೀದ್‌ ಬೌನ್ಸರ್‌ಗೆ ವಿಕೆಟ್‌ ಒಪ್ಪಿಸಿದರು.

ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಜತೆಯಾಟದಲ್ಲಿ 59 ರನ್‌ ಪೇರಿಸಿದ್ದಾರೆ. ರೋಹಿತ್‌ ಶರ್ಮ 47 ಮತ್ತು ವಿರಾಟ್‌ ಕೊಹ್ಲಿ 27 ವೈಯಕ್ತಿಕ ರನ್‌ ಕಲೆಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.