ಅಥೆನ್ಸ್ (ಪಿಟಿಐ): ಭಾರತದ ಸಹಜ್ ಗ್ರೋವರ್ ಇಲ್ಲಿ ನಡೆದ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 16ನೇ ಸ್ಥಾನ ಪಡೆದರು.
ಗುರುವಾರ ನಡೆದ 13ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಸಹಜ್ ಸರ್ಬಿಯದ ಅಲೆಕ್ಸಾಂಡರ್ ಇನ್ಡ್‌ಜಿಕ್ ಎದುರು ಸೋಲು ಅನುಭವಿಸಿದರು. 16ರ ಹರೆಯದ ಸಹಜ್ ಇಲ್ಲಿ ತಮ್ಮ ಕೊನೆಯ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆಯುವಲ್ಲಿ ಯಶಸ್ವಿಯಾದರು. ಆದ್ದರಿಂದ ಅವರು ಭಾರತದ ಮುಂದಿನ ಗ್ರ್ಯಾಂಡ್‌ಮಾಸ್ಟರ್ ಎನಿಸಲಿದ್ದಾರೆ.
ಫಿಡೆಯ ಸಭೆ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಆ ಬಳಿಕ ಸಹಜ್‌ಗೆ ಅಧಿಕೃತವಾಗಿ ಗ್ರ್ಯಾಂಡ್‌ಮಾಸ್ಟರ್ ಪದವಿ ಲಭಿಸಲಿದೆ.
ಸಹಜ್ ಒಟ್ಟು ಎಂಟು ಪಾಯಿಂಟ್ ಕಲೆಹಾಕುವಲ್ಲಿ ಯಶಸ್ವಿಯಾದರು. ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ಪಿ. ಶ್ಯಾಮ್‌ನಿಖಿಲ್ ಮತ್ತು ಎಂ. ಶ್ಯಾಮ್‌ಸುಂದರ್ ಕ್ರಮವಾಗಿ 26 ಹಾಗೂ 29ನೇ ಸ್ಥಾನಗಳನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.