ಮೊಹಾಲಿ (ಪಿಟಿಐ): ಬಿರುಸಿನ ಬ್ಯಾಟಿಂಗ್‌ನಿಂದ ಹೊಳೆದ ಕೀರೊನ್ ಪೊಲಾರ್ಡ್ (94; 83 ನಿ., 55 ಎ., 8 ಬೌಂಡರಿ, 5 ಸಿಕ್ಸರ್) ಹಾಗೂ ಶತಕ ಸಂಭ್ರಮದಿಂದ ಮಿಂಚಿದ ಡೆವೋನ್ ಸ್ಮಿತ್ (107; 194 ನಿ., 133 ಎ., 11 ಬೌಂಡರಿ, 1 ಸಿಕ್ಸರ್) ಅವರು ಐರ್ಲೆಂಡ್ ಎದುರು ವೆಸ್ಟ್ ಇಂಡೀಸ್ ತಂಡವು 44 ರನ್‌ಗಳ ಅಂತರದಿಂದ ವಿಜಯ ಸಾಧಿಸಲು ಕಾರಣರಾದರು.
ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ‘ಟಾಸ್’ ಗೆದ್ದ ಐರ್ಲೆಂಡ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ವಿರುದ್ಧ ಗುರಿ ಬೆನ್ನಟ್ಟಿ ಯಶಸ್ವಿಯಾದ ಐರ್ಲೆಂಡ್ ಅದೇ ರೀತಿಯಲ್ಲಿ ವಿಂಡೀಸ್ ವಿರುದ್ಧವೂ ವಿಜಯ ಸಾಧಿಸಬೇಕು ಎನ್ನುವ ವಿಲಿಯಮ್ ಪೋರ್ಟರ್‌ಫೀಲ್ಡ್ ಯೋಜನೆ ಕೈಗೂಡಲಿಲ್ಲ.
ವಿಂಡೀಸ್ ತನ್ನ ಪಾಲಿನ ಐವತ್ತು ಓವರ್‌ಗಳ ಕೊನೆಯ ಎಸೆತದಲ್ಲಿ ಆಲ್‌ಔಟ್ ಆದರೂ 275 ರನ್‌ಗಳನ್ನು ಪೇರಿಸಿತು. ರನ್ ಗತಿಗೆ ಚುರುಕು ನೀಡಿದ ಪೊಲಾರ್ಡ್ ಹಾಗೂ ಮಂದಗತಿಯಲ್ಲಿ ಸಾಗಿದರೂ ಶತಕ ಪೂರೈಸಿದ ಸ್ಮಿತ್ ಗೆಲುವಿನ ಭರವಸೆ ಮೂಡಿಸಿದರು. ನಿರೀಕ್ಷೆ ಹುಸಿಯಾಗಲಿಲ್ಲ. ವಿಂಡೀಸ್ ಬೌಲರ್‌ಗಳೂ ಪ್ರಭಾವಿ ಎನಿಸಿದರು. ಎದುರಾಳಿ ಐರ್ಲೆಂಡ್ ಗುರಿಯತ್ತ ಸಾಗುವ ಹಾದಿಯಲ್ಲಿ ಕಲ್ಲು-ಮುಳ್ಳು ಸುರಿದರು.
ಐರ್ಲೆಂಡ್ 49 ಓವರುಗಳಲ್ಲಿ 231 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಒಪ್ಪಿಸಿತು. ಎಡ್ ಜಾಯ್ಸಿ (84; 150 ನಿ., 106 ಎ., 9 ಬೌಂಡರಿ) ಹಾಗೂ ಗ್ಯಾರಿ ವಿಲ್ಸನ್ (61; 90 ನಿ., 62 ಎ., 6 ಬೌಂಡರಿ, 1 ಸಿಕ್ಸರ್) ಬೆವರು ಸುರಿಸಿದರೂ, ತಮ್ಮ ತಂಡವನ್ನು ಗೆಲುವಿನ ಹತ್ತಿರಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ.ವಿಂಡೀಸ್ ಪರ ಮೊಟ್ಟ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಆಡಿದ ಆ್ಯಂಡ್ರೆ ರಸಲ್ ಅವರು ಪ್ರಭಾವಿ ಆಟವಾಡಲಿಲ್ಲ.
ಸ್ಕೋರು ವಿವರ
ವೆಸ್ಟ್ ಇಂಡೀಸ್: 50 ಓವರುಗಳಲ್ಲಿ 275
ಡೆವೊನ್ ಸ್ಮಿತ್ ಬಿ ಕೆವಿನ್ ಓಬ್ರಿಯನ್ 107
ಶಿವನಾರಾಯಣ್ ಚಂದ್ರಪಾಲ್ ಸಿ ಪೋರ್ಟರ್‌ಫೀಲ್ಡ್ ಬಿ ಕೆವಿನ್ ಓಬ್ರಿಯನ್ 35
ಡ್ವೇನ್ ಬ್ರೇವೊ ಬಿ ಕೆವಿನ್ ಓಬ್ರಿಯನ್ 00
ರಾಮನರೇಶ್ ಸರವಣ್ ಸಿ ಜಾನ್ ಮೂನಿ ಬಿ ಜಾರ್ಜ್ ಡಾಕ್ರೆಲ್ 10
ಕೀರೊನ್ ಪೊಲಾರ್ಡ್ ಸಿ ಬಾಯ್ಡೆ ರಂಕಿನ್ ಬಿ ಜಾನ್ ಮೂನಿ 94
ಡೇರನ್ ಸ್ಯಾಮಿ ಸಿ ಜಾರ್ಜ್ ಡಾಕ್ರೆಲ್ ಬಿ ಕೆವಿನ್ ಓಬ್ರಿಯನ್ 04
ಡೆವೋನ್ ಥಾಮಸ್ ಸಿ ನೀಲ್ ಓಬ್ರಿಯನ್ ಬಿ ಬಾಯ್ಡಿ ರಂಕಿನ್ 02
ಆ್ಯಂಡ್ರೆ ರಸಲ್ ಬಿ ಜಾನ್ ಮೂನಿ 03
ನಿಕಿಟಾ ಮಿಲ್ಲರ್ ಔಟಾಗದೆ 05
ಸುಲೇಮಾನ್ ಬೆನ್ ರನ್‌ಔಟ್ (ಆ್ಯಂಡ್ರೆ ಬೊಥಾ/ಜಾನ್ ಮೂನಿ) 02
ಕೆಮಾರ್ ರಾಚ್ ಸಿ ಪಾಲ್ ಸ್ಟಿರ್ಲಿಂಗ್ ಬಿ ಆ್ಯಂಡ್ರೆ ಬೊಥಾ 01
ಇತರೆ: (ಬೈ-3, ಲೆಗ್‌ಬೈ-6, ವೈಡ್-3) 12
ವಿಕೆಟ್ ಪತನ: 1-89 (ಶಿವನಾರಾಯಣ್ ಚಂದ್ರಪಾಲ್; 24.2), 2-89 (ಡ್ವೇನ್ ಬ್ರೇವೊ; 24.5), 3-130 (ರಾಮನರೇಶ್ ಸರವಣ್; 31.6), 4-218 (ಡೆವೊನ್ ಸ್ಮಿತ್; 42.3), 5-222 (ಡೇರನ್ ಸ್ಯಾಮಿ; 42.6), 6-228 (ಡೆವೋನ್ ಥಾಮಸ್; 44.6), 7-267 (ಕೀರೊನ್ ಪೊಲಾರ್ಡ್; 48.1), 8-267 (ಆ್ಯಂಡ್ರೆ ರಸಲ್; 48.2), 9-272 (ಸುಲೇಮಾನ್ ಬೆನ್), 10-275 (ಕೆಮಾರ್ ರಾಚ್; 49.6).
ಬೌಲಿಂಗ್: ಬಾಯ್ಡೆ ರಂಕಿನ್ 10-1-35-1, ಅಲೆಕ್ಸ್ ಕ್ಯೂಸೆಕ್ 7-1-22-0, ಜಾನ್ ಮೂನಿ 9-0-58-2 (ವೈಡ್-2), ಆ್ಯಂಡ್ರೆ ಬೊಥಾ 10-0-56-1, ಕೆವಿನ್ ಓಬ್ರಿಯನ್ 9-0-71-4, ಸ್ಟಿರ್ಲಿಂಗ್ 2-0-9-0, ಜಾರ್ಜ್ ಡಾಕ್ರೆಲ್ 3-0-15-1 (ವೈಡ್-1)
ಐರ್ಲೆಂಡ್: 49 ಓವರುಗಳಲ್ಲಿ 231
ವಿಲಿಯಮ್ ಪೋರ್ಟರ್‌ಫೀಲ್ಡ್ ಸಿ ರಾಮ್‌ಪಾಲ್ (ಬದಲಿ ಆಟಗಾರ) ಬಿ ಡೇರನ್ ಸ್ಯಾಮಿ 11
ಪಾಲ್ ಸ್ಟಿರ್ಲಿಂಗ್ ಸಿ ಡೇರನ್ ಸ್ಯಾಮಿ ಬಿ ಸುಲೇಮಾನ್ ಬೆನ್ 05
ಎಡ್ ಜಾಯ್ಸಾ ಬಿ ಆ್ಯಂಡ್ರೆ ರಸಲ್ 84
ನೀಲ್ ಓಬ್ರಿಯನ್ ಬಿ ಸುಲೇಮಾನ್ ಬೆನ್ 25
ಗ್ಯಾರಿ ವಿಲ್ಸನ್ ಎಲ್‌ಬಿಡಬ್ಲ್ಯು ಬಿ ಡೇರನ್ ಸ್ಯಾಮಿ 61
ಕೆವಿನ್ ಓಬ್ರಿಯನ್ ಸಿ ಕೀರೊನ್ ಪೊಲಾರ್ಡ್ ಬಿ ಡೇರನ್ ಸ್ಯಾಮಿ 05
ಅಲೆಕ್ಸ್ ಕ್ಯೂಸೆಕ್ ಸ್ಟಂಪ್ಡ್ ಡೆವೋನ್ ಥಾಮಸ್ ಬಿ ಸುಲೇಮಾನ್ ಬೆನ್ 02
ಜಾನ್ ಮೂನಿ ಬಿ ಕೆಮಾರ್ ರಾಚ್ 06
ಆ್ಯಂಡ್ರೆ ಬೊಥಾ ರನ್‌ಔಟ್ (ಡೇರನ್ ಸ್ಯಾಮಿ) 00
ಜಾರ್ಜ್ ಡಾಕ್ರೆಲ್ ಬಿ ಸುಲೇಮಾನ್ ಬೆನ್ 19
ಬಾಯ್ಡೆ ರಂಕಿನ್ ಔಟಾಗದೆ 05
ಇತರೆ: (ಲೆಗ್‌ಬೈ-4, ವೈಡ್-3, ನೋಬಾಲ್-1) 08
ವಿಕೆಟ್ ಪತನ: 1-6 (ಪಾಲ್ ಸ್ಟಿರ್ಲಿಂಗ್; 1.4), 2-42 (ವಿಲಿಯಮ್ ಪೋರ್ಟರ್‌ಫೀಲ್ಡ್; 11.6), 3-86 (ನೀಲ್ ಓಬ್ರಿಯನ್; 20.6), 4-177 (ಎಡ್ ಜಾಯ್ಸಿ; 37.3), 5-187 (ಕೆವಿನ್ ಓಬ್ರಿಯನ್; 39.4), 6-199 (ಗ್ಯಾರಿ ವಿಲ್ಸನ್; 41.4), 7-199 (ಅಲೆಕ್ಸ್ ಕ್ಯೂಸೆಕ್; 42.2), 8-201 (ಆ್ಯಂಡ್ರೆ ಬೊಥಾ; 43.4), 9-215 (ಜಾನ್ ಮೂನಿ; 45.5), 10-231 (ಜಾರ್ಜ್ ಡಾಕ್ರೆಲ್; 48.6).
ಬೌಲಿಂಗ್: ಕೆಮಾರ್ ರಾಚ್ 8-0-34-1, ಸುಲೇಮಾನ್ ಬೆನ್ 10-0-53-4 (ವೈಡ್-2), ಡೇರನ್ ಸ್ಯಾಮಿ 10-3-31-3, ಆ್ಯಂಡ್ರೆ ರಸಲ್ 10-2-37-1 (ನೋಬಾಲ್-1), ಕೀರೊನ್ ಪೊಲಾರ್ಡ್ 5-0-32-0 (ವೈಡ್-1), ನಿಕಿಟಾ ಮಿಲ್ಲರ್ 6-0-40-0
ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 44 ರನ್ ಗೆಲುವು;
ಪಂದ್ಯ ಶ್ರೇಷ್ಠ: ಕೀರೊನ್ ಪೊಲಾರ್ಡ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.