ADVERTISEMENT

ಶರಪೋವಾಗೆ ಆಘಾತ

ಏಜೆನ್ಸೀಸ್
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ರಷ್ಯಾದ ಮರಿಯಾ ಶರಪೋವಾ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಜಪಾನ್‌ನ ನವೊಮಿ ಒಸಾಕ. –ಎಎಫ್‌ಪಿ ಚಿತ್ರ
ರಷ್ಯಾದ ಮರಿಯಾ ಶರಪೋವಾ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಜಪಾನ್‌ನ ನವೊಮಿ ಒಸಾಕ. –ಎಎಫ್‌ಪಿ ಚಿತ್ರ   

ಇಂಡಿಯಾನ ವೇಲ್ಸ್‌, ಅಮೆರಿಕ: ರಷ್ಯಾದ ಮರಿಯಾ ಶರಪೋವ ಡಬ್ಲ್ಯುಟಿಎ ಇಂಡಿಯಾನ ವೇಲ್ಸ್‌ ಟೆನಿಸ್ ಟೂರ್ನಿಯ ಆರಂಭದಲ್ಲೇ ಆಘಾತ ಅನುಭವಿಸಿದರು. ಬುಧವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಜಪಾನ್‌ನ ನವೊಮಿ ಒಸಾಕ ವಿರುದ್ಧ 6–4, 6–4ರಿಂದ ಸೋತರು.

ಕಳೆದ ಎರಡು ಬಾರಿ ಈ ಟೂರ್ನಿಯಲ್ಲಿ ಆಡಲು ಶರ‍ಪೋವಾ ಅವರಿಗೆ ಸಾಧ್ಯವಾಗಲಿಲ್ಲ. ಈ ಬಾರಿ ಅವರು ಟೂರ್ನಿಯ ‍ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಆರು ಬಾರಿ ತಪ್ಪುಗಳನ್ನು ಎಸಗಿದ ಅವರು ಸೋತರು. ನವೊಮಿ ಐದು ಬಾರಿ ಮರಿಯಾ ಅವರ ಸರ್ವ್ ಮುರಿದು 95 ನಿಮಿಷದಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿದರು.

ಸ್ಯಾಮ್‌ಗೆ ಜಯ
ಅಮೆರಿಕದ ಲಾರೆನ್ ಡೇವಿಸ್ ಅವರನ್ನು 3–6, 6–3, 6–3ರಿಂದ ಮಣಿಸಿದ ಸ್ಯಾಮ್‌ ಸ್ಟಾಸರ್‌ ಎರಡನೇ ಸುತ್ತಿಗೆ ಪ್ರವೇಶಿಸಿದರು. ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಅಮಾಂಡ ಅನಿಸಿಮೊವಾ 6–2, 6–2ರಲ್ಲಿ ಪೌಲಿನ್ ಪರ್ಮೆಂಟೈರ್‌ ಅವರನ್ನೂ ಕ್ಯಾರೊಲಿನ್ ಡೊಲೆಹೆಡೆ 3–6, 7–6(6), 6–3ರಲ್ಲಿ ಶೆಲ್ಬಿ ರಾಜರ್‌ ಅವರನ್ನೂ ಸೋಲಿಸಿದರು.

ADVERTISEMENT

ಟಿಮಿಯಾ ಬಾಬೊಸ್ ಅವರನ್ನು ಬೆಲಿಂದಾ ಬೆನ್ಸಿಕ್‌ 1–6, 6–1, 7–6(4)ರಿಂದ ಮತ್ತು ಜೆನಿ ಬೌಷರ್ ಅವರನ್ನು ಸಚಿವಾ ವಿಕೆರಿ 6–3, 6–4ರಿಂದ ಮಣಿಸಿದರು.


ಜಪಾನ್‌ನ ನವೊಮಿ ಒಸಾಕ ಎದುರಿನ ಪಂದ್ಯದಲ್ಲಿ ನಿರಾಸೆ ಕಂಡ ರಷ್ಯಾದ ಮರಿಯಾ ಶರಪೋವಾ. –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.