ADVERTISEMENT

ಶೂಟಿಂಗ್: ಅಭಿನವ್ ಬಿಂದ್ರಾ, ಗಗನ್ ನಾರಂಗ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಲಂಡನ್ (ಪಿಟಿಐ): ಅಭಿನವ್ ಬಿಂದ್ರಾ ಮತ್ತು ಗಗನ್ ನಾರಂಗ್ ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು. ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯ ಅರ್ಹತಾ ಹಂತದಲ್ಲಿ ಭಾರತದ ಈ ಶೂಟರ್‌ಗಳು ಕ್ರಮವಾಗಿ 10 ಹಾಗೂ 12ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸದೆ ನಿರಾಸೆ ಅನುಭವಿಸಿದರು. ಇವರಿಬ್ಬರೂ ತಲಾ 596 ಪಾಯಿಂಟ್ ಕಲೆಹಾಕಿದರು. `ಶೂಟ್ ಆಫ್~ನಲ್ಲಿ ನಾರಂಗ್‌ಗೆ 12ನೇ ಸ್ಥಾನ ಲಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.