ADVERTISEMENT

ಸಂವಿಧಾನ ತಿದ್ದುಪಡಿ: ಐಒಸಿ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ನಿಷೇಧದ ಭೀತಿಗೆ ಬೆದರಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಸ್ಪಷ್ಟ ನಿಲುವು ತೆಳೆಯದ ಹೊರತು ನಿಷೇಧ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಅಂತರ ರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಖಡಕ್ಕಾಗಿ ಹೇಳಿದೆ.

ಡಿಸೆಂಬರ್‌ 10ರ ಒಳಗೆ ಐಒಎ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳ ಬೇಕು ಎಂದು ಐಒಸಿ ಗಡುವು ನೀಡಿತ್ತು. ಇದಕ್ಕೆ ಮಣಿದು ಭಾರತ ಒಲಿಂಪಿಕ್‌ ಸಂಸ್ಥೆ ಹೋದ ವಾರ ತಿದ್ದುಪಡಿ ಮಾಡಿಕೊಂಡಿತ್ತು. ಆದರೂ, ಈ ಕ್ರಮ ಐಒಸಿಗೆ ಪೂರ್ಣ ತೃಪ್ತಿ ನೀಡಿಲ್ಲ.

ಹೋದ ವಾರ ನಡೆದ ಸಭೆಯಲ್ಲಿ ಫೆಬ್ರುವರಿ 9ರಂದು ಚುನಾವಣೆ ನಡೆಸುವ ಬಗ್ಗೆ ಐಒಎ ತೀರ್ಮಾನಿಸಿದೆ. ಆದರೆ, ಈ ಚುನಾವಣೆಯಲ್ಲಿ ಅಭಯ್‌ ಸಿಂಗ್‌ ಚೌಟಾಲ ಮತ್ತು ಲಲಿತ್‌ ಭಾನೋಟ್‌ ಸ್ಪರ್ಧಿಸುವಂತಿಲ್ಲ. ಏಕೆಂದರೆ, ಭ್ರಷ್ಟಾಚಾರ ಒಳಗೊಂಡಂತೆ ಇತರೆ ಯಾವುದೇ ಕ್ರಿಮಿನಲ್‌ ಪ್ರಕರಣ ಗಳಲ್ಲಿ ಆರೋಪ ಎದುರಿಸುತ್ತಿರುವವರು ಚುನಾವಣೆಯಲ್ಲಿ ಕಣಕ್ಕಿಳಿಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.