ADVERTISEMENT

ಸಚಿನ್ ಆಟೋಗ್ರಾಫ್ ಬೇಕು: ದೋನಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 18:40 IST
Last Updated 28 ಫೆಬ್ರುವರಿ 2011, 18:40 IST
ಸಚಿನ್ ಆಟೋಗ್ರಾಫ್ ಬೇಕು: ದೋನಿ
ಸಚಿನ್ ಆಟೋಗ್ರಾಫ್ ಬೇಕು: ದೋನಿ   

ಬೆಂಗಳೂರು: ಕ್ರಿಕೆಟ್ ಅಭಿಮಾನಿಯಾಗಿ ಮಹೇಂದ್ರ ಸಿಂಗ್ ದೋನಿಗೆ ಶ್ರೇಷ್ಠ ಆಟಗಾರನ ಆಟೋಗ್ರಾಫ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರಿಗೆ ಆ ಶ್ರೇಷ್ಠ ಆಟಗಾರನ ಹಸ್ತಾಕ್ಷರ ಬೇಕಂತೆ. ಅದು ತಂಡದ ಸಹ ಆಟಗಾರ ಹಾಗೂ ಕ್ರಿಕೆಟ್‌ನ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್.

‘ಈ ಸಂಗತಿಯನ್ನು ಊಹಿಸಲು ಹೆಚ್ಚು ಕಷ್ಟಪಡಬೇಕಾದ ಅಗತ್ಯ ಇಲ್ಲ. ಅದು ಸಚಿನ್ ತೆಂಡೂಲ್ಕರ್ ಆಟೋಗ್ರಾಫ್. ಅವರ ಹಸ್ತಾಕ್ಷರ ನನಗೆ ಬೇಕು’ ಎಂದು ದೋನಿ ನಗರದಲ್ಲಿ ನಡೆದ ವ್ಯಂಗ್ಯಚಿತ್ರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಪುಸ್ತಕದಲ್ಲಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ತಂಡದ ಆಟಗಾರರ ಚಿತ್ರಗಳಿವೆ. ಸಮಾರಂಭದಲ್ಲಿ ಹರಭಜನ್ ಸಿಂಗ್, ವಿರಾಟ್ ಕೊಹ್ಲಿ ಹಾಗೂ ಪಿಯೂಷ್ ಚಾವ್ಲಾ ಉಪಸ್ಥಿತರಿದ್ದರು.

ದೋನಿಗೆ ಯುವರಾಜ್ ವ್ಯಂಗ್ಯ ಚಿತ್ರ ಬಹಳ ಇಷ್ಟವಾಯಿತು. ಅದೇ ರೀತಿಯಲ್ಲಿ ಹರಭಜನ್‌ಗೆ ಗೌತಮ್ ಗಂಭೀರ್ ಅವರ ಕ್ಯಾರಿಕೇಚರ್ ತುಂಬಾ ಇಷ್ಟವಾಯಿತು ಎನ್ನುವುದು ವಿಶೇಷ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.