ಮೆಲ್ಬರ್ನ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಚಿನ್ ತೆಂಡೂಲ್ಕರ್ ನೂರನೇ ಶತಕ ಗಳಿಸುವರು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಸಚಿನ್ ಈ ಸಾಧನೆ ಮಾಡಿದರೆ ಸಂಭ್ರಮಿಸಲು ಎಲ್ಲರೂ ತಕ್ಕ ಸಿದ್ಧತೆ ನಡೆಸಿದ್ದರು. ಆದರೆ ಅವರಿಂದ ಶತಕ ಬರಲಿಲ್ಲ. ಅಭಿಮಾನಿಗಳ ಕಾಯುವಿಕೆ ಮುಂದುವರಿಯಿತು.
ಆದರೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಕೂಡಾ ಸರಣಿಯುದ್ದಕ್ಕೂ ಸಚಿನ್ ಶತಕದ ನಿರೀಕ್ಷೆಯಲ್ಲಿತ್ತು!. ಶತಕಗಳ ಶತಕ ಸಾಧನೆ ಮಾಡಿದರೆ ಸಚಿನ್‌ಗೆ ನೀಡಲು ಟ್ರೋಫಿಯೊಂದನ್ನೂ ಸಿದ್ಧಪಡಿಸಿತ್ತು ಎಂದು `ಆಸ್ಟ್ರೇಲಿಯನ್~ ಪತ್ರಿಕೆ ವರದಿ ಮಾಡಿದೆ. ಆ ಟ್ರೋಫಿ ಮಾತ್ರ ಸಚಿನ್ ಕೈಸೇರಲೇ ಇಲ್ಲ.
`ಟೆಸ್ಟ್ ಮತ್ತು ತ್ರಿಕೋನ ಏಕದಿನ ಸರಣಿಯ ವೇಳೆ ಭಾರತ ತನ್ನ ಪಂದ್ಯವನ್ನಾಡಿದ ಎಲ್ಲ ತಾಣಗಳಿಗೂ ಆ ಟ್ರೋಫಿಯನ್ನು ಕೊಂಡೊಯ್ಯಲಾಗಿತ್ತು~ ಎಂದು ವರದಿ ತಿಳಿಸಿದೆ. ಸಚಿನ್ ಅವರಿಂದ ನೂರನೇ ಶತಕ ದಾಖಲಾಗಲಿಲ್ಲ. ಈ ಕಾರಣ ಟ್ರೋಫಿ ಸಿಎ ಕೈಯಲ್ಲೇ ಉಳಿದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.