ADVERTISEMENT

ಸಚಿನ್ ಮೇಲೆ ಪ್ರಯೋಗ ಹೇರಬೇಡಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST
ಸಚಿನ್ ಮೇಲೆ ಪ್ರಯೋಗ ಹೇರಬೇಡಿ
ಸಚಿನ್ ಮೇಲೆ ಪ್ರಯೋಗ ಹೇರಬೇಡಿ   

ಅಡಿಲೇಡ್ (ಪಿಟಿಐ): ಸರದಿ ಪ್ರಕಾರ ವಿಶ್ರಾಂತಿ ಎನ್ನುವ ನಿಯಮವನ್ನು ಸಚಿನ್ ತೆಂಡೂಲ್ಕರ್ ಅವರಂಥ ಅನುಭವಿ ಕ್ರಿಕೆಟಿಗನ ಮೇಲೆ ಒತ್ತಾಯಪೂರ್ವಕವಾಗಿ ಹೇರಬೇಡಿ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಹೇಳಿದ್ದಾರೆ.

ಇದೇ ನಿಯಮದಂತೆ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ತೆಂಡೂಲ್ಕರ್ ಅವರನ್ನು ಹನ್ನೊಂದರ ಪಟ್ಟಿಯಿಂದ ಹೊರಗೆ ಇಡಲಾಗಿತ್ತು. ಭಾರತ ತಂಡದ ಆಡಳಿತದ ಈ ಪ್ರಯೋಗವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

`ಈ ರೀತಿ ವಿಶ್ರಾಂತಿ ನೀಡುವ ಕ್ರಮವು ಏಷ್ಯಾದ ಕ್ರಿಕೆಟ್ ರಾಷ್ಟ್ರಗಳಿಗೆ ಒಪ್ಪುವುದಿಲ್ಲ. ಅದರಲ್ಲಿಯೂ ಸಚಿನ್ ಇರುವಂಥ ತಂಡದಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸುವುದು ಸರಿಯೂ ಅಲ್ಲ~ ಎಂದಿರುವ ಅವರು `ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡುತ್ತಿರುವ ಕಾಲದಲ್ಲಿ ಹೀಗೆ ವಿಶ್ರಾಂತಿ ನೀಡುವುದು ಸಮರ್ಥನೀಯವಲ್ಲ~ ಎಂದು ಅವರು ಖಾಸಗಿ ಚಾನಲ್‌ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.