ADVERTISEMENT

ಸನ್‌ರೈಸರ್ಸ್‌ಗೆ ಒಲಿದ ಜಯ

ಶಿಖರ್‌ ಧವನ್‌ ಭರ್ಜರಿ ಬ್ಯಾಟಿಂಗ್; ಶಕೀಬ್‌, ಕೌಲ್‌ಗೆ ತಲಾ ಎರಡು ವಿಕೆಟ್‌

ಪಿಟಿಐ
Published 9 ಏಪ್ರಿಲ್ 2018, 19:59 IST
Last Updated 9 ಏಪ್ರಿಲ್ 2018, 19:59 IST
ಅರ್ಧಶತಕ ಗಳಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಶಿಖರ್ ಧವನ್ ಅವರ ಬ್ಯಾಟಿಂಗ್ ಶೈಲಿ ಪಿಟಿಐ ಚಿತ್ರ
ಅರ್ಧಶತಕ ಗಳಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಶಿಖರ್ ಧವನ್ ಅವರ ಬ್ಯಾಟಿಂಗ್ ಶೈಲಿ ಪಿಟಿಐ ಚಿತ್ರ   

ಹೈದರಾಬಾದ್‌: ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ (ಅಜೇಯ 77; 57 ಎ, 1 ಸಿ, 13 ಬೌಂ) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೋಮವಾರ 9 ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಲು ನಾಯಕ ಅಜಿಂಕ್ಯ ರಹಾನೆ ಮತ್ತು ಯುವ ಆಟಗಾರ ಡಿ ಆರ್ಚ್‌ ವಿಫಲರಾದರು.

ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಬೆನ್ ಸ್ಟೋಕ್ಸ್ ಎಂಟು ಎಸೆತಗಳಲ್ಲಿ ಐದು ರನ್ ಗಳಿಸಿ ಮರಳಿದರು.

ADVERTISEMENT

ಆದರೆ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಕ್ರೀಸ್‌ನಲ್ಲಿ ಭದ್ರವಾಗಿ ತಳವೂರಿದರು. ಅವರ ಜೊತೆಗೂಡಿದ ರಾಹುಲ್ ತ್ರಿಪಾಠಿ ನಾಲ್ಕನೇ ವಿಕೆಟ್‌ಗೆ 29 ರನ್‌ ಸೇರಿಸಿ ತಂಡವನ್ನು 100ರ ಸನಿಹ ಕೊಂಡೊಯ್ದರು.

ಎರಡು ಎಸೆತಗಳ ಅಂತರದಲ್ಲಿ ಇವರಿಬ್ಬರೂ ಔಟಾದ ನಂತರ ತಂಡ ಮತ್ತೆ ಕುಸಿತದ ಹಾದಿ ಹಿಡಿಯಿತು. ಅಂತಿಮ ಓವರ್‌ಗಳಲ್ಲಿ ಶ್ರೇಯಸ್ ಗೋಪಾಲ್‌ ತಾಳ್ಮೆಯ 18 ರನ್‌ ಗಳಿಸಿದ್ದರಿಂದ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಿತು.

ಜೋಸ್ ಬಟ್ಲರ್ ಆರು ರನ್ ಗಳಿಸಿದರೆ ಕೆ.ಗೌತಮ್‌ ಶೂನ್ಯಕ್ಕೆ ಔಟಾದರು.

ಸನ್‌ರೈಸರ್ಸ್‌ ತಂಡವು 15.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ್ ರಾಯಲ್ಸ್‌: 20 ಓವರ್‌ಗಳಲ್ಲಿ 9ಕ್ಕೆ125 (ಅಜಿಂಕ್ಯ ರಹಾನೆ 13, ಸಂಜು ಸ್ಯಾಮ್ಸನ್‌ 49, ರಾಹುಲ್ ತ್ರಿಪಾಠಿ 17, ಶ್ರೇಯಸ್ ಗೋಪಾಲ್‌ 18; ಭುವನೇಶ್ವರ್ ಕುಮಾರ್‌ 30ಕ್ಕೆ1, ಸ್ಟಾನ್‌ಲೇಕ್‌ 29ಕ್ಕೆ1, ಶಕೀಬ್ ಅಲ್ ಹಸನ್‌ 17ಕ್ಕೆ2, ಸಿದ್ಧಾರ್ಥ್ ಕೌಲ್‌ 17ಕ್ಕೆ2, ರಶೀದ್ ಖಾನ್‌ 23ಕ್ಕೆ1)

ಸನ್‌ರೈಸರ್ಸ್: 15.5 ಓವರ್‌ಗಳಲ್ಲಿ 1 ವಿಕೆಟ್‌ಗೆ 127 (ಶಿಖರ್ ಧವನ್ 77, ಕೇನ್ ವಿಲಿಯಮ್ಸನ್ 36, ಜಯದೇವ ಉನದ್ಕತ್ 28ಕ್ಕೆ1)

ಫಲಿತಾಂಶ: ಸನ್‌ರೈಸರ್ಸ್ ತಂಡಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.