ADVERTISEMENT

‘ಸಹೋದರ’ ಎಬಿಡಿಗೆ ಕೊಹ್ಲಿ ಶುಭಾಶಯ

ಪಿಟಿಐ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಎಬಿ ಡಿವಿಲಿಯರ್ಸ್ (ಎಡ) ಮತ್ತು ವಿರಾಟ್ ಕೊಹ್ಲಿ
ಎಬಿ ಡಿವಿಲಿಯರ್ಸ್ (ಎಡ) ಮತ್ತು ವಿರಾಟ್ ಕೊಹ್ಲಿ   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹೋದರ ಎಂದು ಸಂಬೋಧಿಸಿದ್ದಾರೆ.

ಡಿವಿಲಿಯರ್ಸ್‌ಗೆ ಶನಿವಾರ ಶುಭ ಕೋರಿರುವ ಕೊಹ್ಲಿ ನಿವೃತ್ತಿ ಬದುಕು ಖುಷಿಯಾಗಿ ಕಳೆಯಿರಿ ಎಂದಿದ್ದಾರೆ.

‘ಸಹೋದರ, ನೀನು ಮಾಡಿದ ಎಲ್ಲ ಒಳ್ಳೆಯ ಕಾರ್ಯಗಳೂ ಖುಷಿ ನೀಡಿವೆ. ಬ್ಯಾಟಿಂಗ್‌ಗೆ ಹೊಸ ವ್ಯಾಖ್ಯಾನ ಬರೆದ ನೀನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಳೆ ತುಂಬಿದ್ದೀಯ’ ಎಂದು ಕೊಹ್ಲಿ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ  ವಿರಾಟ್ ಮತ್ತು ಎಬಿಡಿ ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.