ADVERTISEMENT

ಸಿಂಧುಗೆ ಬಿಡಬ್ಲ್ಯುಎಫ್‌ ಆಯೋಗದ ಸದಸ್ಯತ್ವ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ಅಥ್ಲೀಟ್‌ ಗಳ ಆಯೋಗದ ಸದಸ್ಯೆಯಾಗಿ ಆಯ್ಕೆ ಯಾಗಿದ್ದಾರೆ.

ನಾಲ್ಕು ಸ್ಥಾನಗಳಿಗಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಬುಧವಾರ ನಡೆದ ಮತದಾನದಲ್ಲಿ ಪಿ.ವಿ.ಸಿಂಧು 129 ಮತಗಳೊಂದಿಗೆ ಅಗ್ರ ಸ್ಥಾನ ಗಳಿಸಿದರು. ಜರ್ಮನಿಯ ಮಾರ್ಕ್‌ ಜ್ವಿಬ್ಲೆವರ್‌ (108 ಮತಗಳು), ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮರ್‌ (103) ಮತ್ತು ಲಿಥುವೇನಿಯಾದ ಅಕ್ವಿಲೆ ಸ್ಟಾಪುಸೈಟಿಟೆ (25) ಆಯ್ಕೆಯಾದ ಇತರ ಆಟಗಾರರು.

ಸಿಂಧು ಸೇರಿದಂತೆ ಮೊದಲ ಮೂವರು ನಾಲ್ಕು ವರ್ಷ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದು ಸ್ಟಾಪುಸೈಟಿಟೆ ಅವರ ಅವಧಿ ಕೇವಲ ಎರಡು ವರ್ಷ. ಎರಡು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಚೀನಾದ ಟಾನ್ ಯುವಾಂಟಿಂಗ್‌ ಅವರ ಸ್ಥಾನವನ್ನು ಸ್ಟಾಪುಸೈಟಿಟೆ ತುಂಬಲಿದ್ದಾರೆ.
ಸಿಂಧು ಅವರನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮಾ ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.