ADVERTISEMENT

ಸಿಕ್ಕಿಬಿದ್ದ ಮೂವರು ಅಥ್ಲೀಟ್‌ಗಳು

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಮೂಡುಬಿದಿರೆ: ಕಳೆದ ಡಿಸೆಂಬರ್‌ನಲ್ಲಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆದ 72ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್‌ನಲ್ಲಿ ಪಾಲ್ಗೊಂಡಿದ್ದ ಮಂಗಳೂರು ವಿವಿಯ ಇಬ್ಬರು ಹಾಗೂ ಒಸ್ಮಾನಿಯ ವಿವಿಯ ಒಬ್ಬ ಕ್ರೀಡಾಪಟು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಬಾಲಕರ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪಕದ ಗೆದ್ದಿದ್ದ ಅವಿನ್ ಕುಮಾರ್ ಮತ್ತು ವನಿತೆಯರ ವಿಭಾಗದ ಹಾಫ್ ಮ್ಯಾರಥಾನ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದ ಸಬೀನಾ ಮಂಗಳೂರು ವಿವಿ ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಅವಿನ್ ಕುಮಾರ್ ಮೆಫಂಟಮೈನ್ ಜತೆ ಸ್ಟಿರಾಯ್ಡ ನ್ಯಾಂಡ್ರೊಲಿನ್ ಹಾಗೂ ಸಬೀನಾ ಸ್ಟಿರಾಯ್ಡ ಸ್ಯಾನೊಜೊರೊಲ್ ಸೇವಿಸಿದ್ದು ಮದ್ದು ಸೇವನೆ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಒಸ್ಮಾನಿಯಾ ವಿ.ವಿ.ಯ ಯೆರ‌್ರಂ ನಾಯ್ಡು (1500 ಮೀ. ಓಟದಲ್ಲಿ ಚಿನ್ನ) ಮೆಫಂಟಮೈನ್ ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿಗೊಂಡಿದೆ.

ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಈ ಮೂವರು ಅಥ್ಲೀಟ್‌ಗಳು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ದಳದ ಶಿಸ್ತು ಸಮಿತಿ ಎದುರು ಹಾಜರಾಗಬೇಕಾಗಿದ್ದು ವಿಚಾರಣೆ ವೇಳೆ ಇವರ ಮೇಲಿನ ಆರೋಪ ಸಾಬೀತಾದರೆ ಎರಡು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.