
ಬೆಂಗಳೂರು: ರಣಜಿ ಚಾಂಪಿಯನ್ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಬುಧವಾರ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಚಾಂಪಿಯನ್ ಪಟ್ಟ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಗರಿಗೆದರಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ‘ಫೈನಲ್’ ಎನಿಸಿದೆ. ಏಕೆಂದರೆ, ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ಮತ್ತು ಎಸ್. ಬದರೀನಾಥ್ ನೇತೃತ್ವದ ತಮಿಳುನಾಡು ತಲಾ ನಾಲ್ಕು ಪಂದ್ಯಗಳನ್ನು ಆಡಿದ್ದು ತಲಾ ಮೂರು ಗೆಲುವು ಸಾಧಿಸಿವೆ.
ಕರ್ನಾಟಕ ಮತ್ತು ಹೈದರಾಬಾದ್ ನಡುವಿನ ಪಂದ್ಯ ‘ಟೈ’ ಆಗಿತ್ತು. ಮಳೆ ಸುರಿದ ಕಾರಣ ತಮಿಳುನಾಡು ಹಾಗೂ ಕೇರಳ ನಡುವಿನ ಪಂದ್ಯ ರದ್ದಾಗಿತ್ತು. ಆದ್ದರಿಂದ ಉಭಯ ತಂಡಗಳು ತಲಾ 14 ಪಾಯಿಂಟ್‌ಗಳನ್ನು ಹೊಂದಿವೆ. ಆದರೆ, ರನ್ ಸರಾಸರಿ ಆಧಾರದ ಮೇಲೆ ತಮಿಳುನಾಡು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವವರು ದಕ್ಷಿಣ ವಲಯದ ಚಾಂಪಿಯನ್ ಎನಿಸಿಕೊಳ್ಳಲಿದ್ದಾರೆ.
ಇಂದಿನ ಪಂದ್ಯಗಳು
* ಕರ್ನಾಟಕ–ತಮಿಳುನಾಡು (ಚಿನ್ನಸ್ವಾಮಿ ಕ್ರೀಡಾಂಗಣ)
* ಆಂಧ್ರ–ಕೇರಳ (ಆಲೂರು)
* ಗೋವಾ–ಹೈದರಾಬಾದ್ (ಆದಿತ್ಯ ಗ್ಲೋಬಲ್)
ಪಂದ್ಯ ಆರಂಭ: ಬೆಳಿಗ್ಗೆ 9ಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.