ಚೆನ್ನೈ (ಪಿಟಿಐ): ಮೈಕ್ ಹಸ್ಸಿ (46, 41ಎಸೆತ, 5ಬೌಂ) ಹಾಗೂ ಸುರೇಶ್ ರೈನಾ (59, 35ಎಸೆತ, 6ಬೌಂ, 2ಸಿಕ್ಸರ್ ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19 ರನ್‌ಗಳ ಜಯಭೇರಿ ಮೊಳಗಿಸಿದೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ನೀಡಿದ 166 ರನ್‌ಗಳ ಗುರಿಗೆ ಉತ್ತರವಾಗಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು.
ಸನ್ನಿ ಸೊಹಾಲ್ (56; 30 ಎಸೆತ, 6 ಬೌಂ, 4 ಸಿ.) ಅವರ ನೆರವಿನಿಂದ ಚಾರ್ಜರ್ಸ್ ಒಂದು ಹಂತದಲ್ಲಿ 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಆದರೆ ಕ್ರಮೇಣ ವಿಕೆಟ್ ಪತನ ಈ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಹಾಗಾಗಿ ಗೆಲುವು ಈ ತಂಡದ ಕೈ ಜಾರಿತು.
ಮೊದಲು ಬ್ಯಾಟ್ ಮಾಡಿದ್ದ ದೋನಿ ನೇತೃತ್ವದ ಚೆನ್ನೈ ತಂಡ 20 ಓವರ್‌ಗಳಲ್ಲಿ 5ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು.
ಮುರಳಿ ವಿಜಯ್ ಅವರಿಗೆ ಪ್ರಗ್ಯಾನ್ ಓಜಾ ಬೇಗನೇ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ರೈನಾ ಸೊಗಸಾದ ಆಟವಾಡಿದರು. ಹಸ್ಸಿ ಜೊತೆಗೂಡಿ ಅಮೂಲ್ಯ 60 ರನ್‌ಗಳ ಜೊತೆಯಾಟವಾಡಿದ ರೈನಾ ಚೆನ್ನೈ ತಂಡ ಉತ್ತಮ ಮೊತ್ತ ಪೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ನಾಲ್ಕು ಓವರ್‌ಗಳಲ್ಲಿ 26 ರನ್ ನೀಡಿ ಮೂರು ವಿಕೆಟ್ ಗಳಿಸಿದ ಓಜಾ ಪ್ರಭಾವಿ ಎನಿಸಿದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 165
ಮುರಳಿ ವಿಜಯ್ ಬಿ ಪ್ರಗ್ಯಾನ್ ಓಜಾ 03
ಮೈಕ್ ಹಸ್ಸಿ ಸಿ ಇಶಾಂತ್ ಶರ್ಮ ಬಿ ಹರ್ಮಿತ್ ಸಿಂಗ್ 46
ಸುರೇಶ್ ರೈನಾ ಸಿ ಶಿಖರ್ ಧವನ್ ಬಿ ಪ್ರಗ್ಯಾನ್ ಓಜಾ 59
ದೋನಿ ಸಿ ಸ್ಟಂಪ್ಡ್ ಸಂಗಕ್ಕಾರ ಬಿ ಪ್ರಗ್ಯಾನ್ ಓಜಾ 21
ಅಲ್ಬಿ ಮಾರ್ಕೆಲ್ ರನ್‌ಔಟ್ (ವೈಟ್/ಸಂಗಕ್ಕಾರ) 19
ಎಸ್.ಬದರೀನಾಥ್ ಔಟಾಗದೆ 05
ಎಸ್.ಅನಿರುದ್ಧ ಔಟಾಗದೆ 03
ಇತರೆ: (ಬೈ-4, ಲೆಗ್‌ಬೈ-1, ವೈಡ್-2, ನೋಬಾಲ್-2) 09
ವಿಕೆಟ್ ಪತನ: 1-18 (ವಿಜಯ್ 1.4), 2-78 (ಹಸ್ಸಿ; 12.3), 3-136 (ರೈನಾ; 17.5), 4-157 (ಮಾರ್ಕೆಲ್; 19.1); 5-162 (ದೋನಿ; 19.4).
ಬೌಲಿಂಗ್: ಜೆ.ಪಿ. ಡುಮಿನಿ 3-0-21-0 (ವೈಡ್-1), ಡೇನಿಯಲ್ ಕ್ರಿಸ್ಟಿಯನ್ 3-0-12-0, ಇಶಾಂತ್ ಶರ್ಮ 4-0-41-0 (ನೋಬಾಲ್-1), ಪ್ರಗ್ಯಾನ್ ಓಜಾ 4-0-26-3 (ವೈಡ್-1), ಅಮಿತ್ ಮಿಶ್ರಾ 3-0-34-0, ಹರ್ಮಿತ್ ಸಿಂಗ್ 3-0-26-1 (ನೋಬಾಲ್-1)
ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146
ಸನ್ನಿ ಸೊಹಾಲ್ ಬಿ ಶದಾಬ್ ಜಕಾತಿ 56
ಶಿಖರ್ ಧವನ್ ಬಿ ಶದಾಬ್ ಜಕಾತಿ 19
ಭರತ್ ಚಿಪ್ಲಿ ಸಿ ಶದಾಬ್ ಜಕಾತಿ ಬಿ ಅಲ್ಬಿ ಮಾರ್ಕೆಲ್ 17
ಕುಮಾರ ಸಂಗಕ್ಕಾರ ಬಿ ಡಗ್ ಬೊಲಿಂಜರ್ 15
ವೈಟ್ ಸಿ ಸಬ್ (ಪ್ಲೆಸಿಸ್) ಬಿ ಅಲ್ಬಿ ಮಾರ್ಕೆಲ್ 13
ಡುಮಿನಿ ಸಿ ಮೈಕ್ ಹಸ್ಸಿ ಬಿ ಅಲ್ಬಿ ಮಾರ್ಕೆಲ್ 17
ಡೇನಿಯಲ್ ಕ್ರಿಸ್ಟಿಯನ್ ರನ್‌ಔಟ್ (ದೋನಿ) 01
ಅಮಿತ್ ಮಿಶ್ರಾ ಸಿ ಅಂಡ್ ಬಿ ಡಗ್ ಬೊಲಿಂಜರ್ 02
ಇಶಾಂತ್ ಶರ್ಮ ಔಟಾಗದೆ 01
ಇತರೆ (ಬೈ-1, ಲೆಗ್‌ಬೈ-1, ವೈಡ್-3) 05
ವಿಕೆಟ್ ಪತನ: 1-71 (ಸೊಹಾಲ್; 6.5); 2-90 (ಧವನ್; 10.6); 3-110 (ಚಿಪ್ಲಿ; 13.2); 4-121 (ಸಂಗಕ್ಕಾರ; 15.5); 5-137 (ವೈಟ್; 18.1); 6-143 (ಡುಮಿನಿ; 18.6); 7-143 (ಕ್ರಿಸ್ಟಿಯನ್; 19.2); 8-146 (ಮಿಶ್ರಾ; 19.6).
ಬೌಲಿಂಗ್: ಅಲ್ಬಿ ಮಾರ್ಕೆಲ್ 4-0-38-3 (ವೈಡ್-2), ಡಗ್ ಬೊಲಿಂಜರ್ 4-0-26-2, ಆರ್.ಅಶ್ವಿನ್ 4-0-23-0, ಸೂರಜ್ ರಂದೀವ್ 4-0-34-0 (ವೈಡ್-1), ಶದಾಬ್ ಜಕಾತಿ 4-0-23-2
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 19 ರನ್ ಜಯ.
ಪಂದ್ಯ ಶ್ರೇಷ್ಠ: ಅಲ್ಬಿ ಮಾರ್ಕೆಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.