ADVERTISEMENT

ಸೆಪೆಕ್ ಟಾಕ್ರಾ ತಂಡದ ಆಯ್ಕೆ 9ರಂದು

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST

ಹುಬ್ಬಳ್ಳಿ: ಮಣಿಪುರದ ಇಂಫಾಲದಲ್ಲಿ ಮುಂದಿನ ತಿಂಗಳ 28ರಿಂದ ನಡೆಯಲಿರುವ ಸಬ್ ಜೂನಿಯರ್ ಬಾಲಕ-ಬಾಲಕಿಯರ ವಿಭಾಗದ ರಾಷ್ಟ್ರೀಯ ಸೆಪೆಕ್ ಟಾಕ್ರಾ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡದ ಆಯ್ಕೆ  ಇದೇ  9ರಂದು ನಗರದಲ್ಲಿ ನಡೆಯಲಿದೆ.

ಆಸಕ್ತರು ಗೋಕುಲ ರಸ್ತೆಯ ಕೆ.ಎಸ್.ಶರ್ಮಾ ವಿಶ್ವ ಶ್ರಮಚೇತನ  ಕಾಲೇಜು ಒಳ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು.
ಶಾಲಾ ಕಾಲೇಜು ವಿದ್ಯಾರ್ಥಿಗಳು, ನೋಂದಾಯಿತ ಸಂಘಗಳು ಹಾಗೂ ಮಾನ್ಯತೆ ಪಡೆದ ಸಂಸ್ಥೆಗಳ ಕ್ರೀಡಾಪಟುಗಳು ವಯಸ್ಸು ದೃಢೀಕರಿಸುವ ಪ್ರಮಾಣಪತ್ರ, ಭಾವಚಿತ್ರದೊಂದಿಗೆ ಬಂದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ರಾಜ್ಯ ಅಮೇಚೂರ್ ಸೆಪೆಕ್ ಟಾಕ್ರಾ ಸಂಸ್ಥೆಯ ಗೌರವ ಸಹಕಾರ್ಯದರ್ಶಿ ಪಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.