ADVERTISEMENT

ಸೆಮಿಫೈನಲ್‌ಗೆ ಶಪೊಲೊವ್‌

ಏಜೆನ್ಸೀಸ್
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಸೆಮಿಫೈನಲ್‌ಗೆ ಶಪೊಲೊವ್‌
ಸೆಮಿಫೈನಲ್‌ಗೆ ಶಪೊಲೊವ್‌   

ಮಿಯಾಮಿ: ಕೆನಡಾದ ಯುವ ಆಟಗಾರ ಡೆನಿಸ್ ಶಪೊಲೊವ್‌ ಇಲ್ಲಿ ನಡೆಯುತ್ತಿರುವ ಎಟಿಪಿ ಡೆರ್ಲಿ ಬೀಚ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶಪೊಲೊವ್‌ 7–5, 6–4ರಲ್ಲಿ ನೇರ ಸೆಟ್‌ಗಳಿಂದ ಟೇಲರ್ ಫಿಟ್ಜ್‌ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಶಪೊಲೊವ್ ಇಲ್ಲಿ ಪ್ರಶಸ್ತಿ ಗೆದ್ದರೆ ಜಪಾನ್‌ನ ಕೀ ನಿಶಿಕೊರಿ ಬಳಿಕ ಚಾಂಪಿಯನ್ ಆದ 18 ವರ್ಷದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ADVERTISEMENT

2000ರಲ್ಲಿ ನಡೆದ ಟೂರ್ನಿಯಲ್ಲಿ ನಿಶಿಕೊರಿ ಪ್ರಶಸ್ತಿ ಗೆದ್ದಿದ್ದರು. ಸೆಮಿಫೈನಲ್‌ನಲ್ಲಿ ಶಪೊಲೊವ್‌ ದಕ್ಷಿಣ ಕೊರಿಯಾದ ಚುಂಗ್ ಹೆಯಾನ್ ಅಥವಾ ಅಮೆರಿಕದ ಫ್ರಾನ್ಸಿಸ್‌ ಟೈಫೊಯ್ ಎದುರು ಆಡಲಿದ್ದಾರೆ.

‘ಯುವ ಆಟಗಾರರು ಇಲ್ಲಿ ಆಡುತ್ತಿದ್ದಾರೆ. ಇದು ಜೂನಿಯರ್ ಟೂರ್ನಿ ಎನಿಸುತ್ತಿದೆ. ಟೆನಿಸ್‌ನಲ್ಲಿ ಹೊಸ ಯುಗ ಆರಂಭವಾಗುವ ನಿರೀಕ್ಷೆಯಿದೆ’ ಎಂದು ಶಪೊಲೊವ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.