ADVERTISEMENT

ಸೆಮಿಫೈನಲ್‌ಗೆ ಆದಿತ್ಯ ಮೆಹ್ತಾ

ವಿಶ್ವ ಕ್ರೀಡಾಕೂಟದ ಸ್ನೂಕರ್: ಅಡ್ವಾಣಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST
ಆದಿತ್ಯ ಮೆಹ್ತಾ
ಆದಿತ್ಯ ಮೆಹ್ತಾ   

ನವದೆಹಲಿ (ಪಿಟಿಐ): ಉತ್ತಮ ಪ್ರದರ್ಶನ ತೋರಿದ ಭಾರತದ  ಅಗ್ರ ರ‌್ಯಾಂಕ್‌ನ ಸ್ನೂಕರ್ ಸ್ಪರ್ಧಿ ಆದಿತ್ಯ ಮೆಹ್ತಾ ಕೊಲಂಬಿಯದಲ್ಲಿ ನಡೆಯುತ್ತಿರುವ ವಿಶ್ವ ಕ್ರೀಡಾಕೂಟದ ಸ್ನೂಕರ್ ಸ್ಪರ್ಧೆಯ ಸೆಮಿಫೈನಲ್ ಪ್ರವೇಶಿಸಿದರು. 

ಆದರೆ ಪಂಕಜ್ ಅಡ್ವಾಣಿ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಮೆಹ್ತಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 3-2 ರಲ್ಲಿ ಇಂಗ್ಲೆಂಡ್‌ನ ಪೆರ‌್ರಿ ರೇಮಂಡ್ ವಿರುದ್ಧ ಜಯ ಪಡೆದರು.

ಭಾರತದ ಆಟಗಾರ ನಾಲ್ಕರಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್‌ನ ದೆಚಾವತ್ ಪೂಮ್‌ಜಾಯೆಂಗ್ ಅವರ ಸವಾಲನ್ನು ಎದುರಿಸುವರು.
ಮೆಹ್ತಾ ಮೊದಲ ಸುತ್ತಿನ ಪಂದ್ಯದಲ್ಲಿ ಗ್ವಾಟೆಮಾಲದ ಲೂಯಿಸ್ ಲೆಮಸ್ ಎದುರು 3-0 ರಲ್ಲಿ ಸುಲಭ ಜಯ ಸಾಧಿಸಿದ್ದರು. ಆದರೆ ವಿಶ್ವ ರ‌್ಯಾಂಕ್‌ನಲ್ಲಿ 19ನೇ ಸ್ಥಾನದಲ್ಲಿರುವ ಪೆರ‌್ರಿ ವಿರುದ್ಧ ಗೆಲುವು ಪಡೆಯಲು ಸಾಕಷ್ಟು ಪ್ರಯಾಸಪಟ್ಟರು.

ಪ್ರಸಕ್ತ ವಿಶ್ವ ರ‌್ಯಾಂಕ್‌ನಲ್ಲಿ 74ನೇ ಸ್ಥಾನದಲ್ಲಿರುವ ಮೆಹ್ತಾ 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.
ಅಡ್ವಾಣಿ ಅವರು ದೆಚಾವತ್ ಪೂಮ್‌ಜಾಯೆಂಗ್ ಕೈಯಲ್ಲಿ 1-3 ರಲ್ಲಿ ಸೋಲು ಅನುಭವಿಸಿದರು. ಎಂಟು ಬಾರಿಯ ವಿಶ್ವ ಚಾಂಪಿಯನ್ ಅಡ್ವಾಣಿ ಎಂದಿನ ಲಯದಲ್ಲಿ ಆಡಲು ವಿಫಲರಾದರು. ಒಂದು ಫ್ರೇಮ್ ಗೆಲ್ಲಲು ಮಾತ್ರ ಶಕ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.