ADVERTISEMENT

ಸೆಮಿಫೈನಲ್‌ಗೆ ಚಿಕ್ಕರಂಗಪ್ಪ, ಅದಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 17:15 IST
Last Updated 4 ಫೆಬ್ರುವರಿ 2011, 17:15 IST
ಸೆಮಿಫೈನಲ್‌ಗೆ ಚಿಕ್ಕರಂಗಪ್ಪ, ಅದಿತಿ
ಸೆಮಿಫೈನಲ್‌ಗೆ ಚಿಕ್ಕರಂಗಪ್ಪ, ಅದಿತಿ   

ಬೆಂಗಳೂರು: ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಚಿಕ್ಕರಂಗಪ್ಪ ತಂತ್ರಗಾರಿಕೆಯಿಂದ ಕ್ಲಬ್ ಬೀಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗಿ, ಸೆಮಿಫೈನಲ್‌ಗೆ ರಹದಾರಿ ಪಡೆದರು. ಪ್ರತಿಯೊಂದು ಸ್ಟ್ರೋಕ್‌ನಲ್ಲಿ ನಿಖರತೆ ತೋರಿದ ಅವರು ಸಂಜಯ್ ಲಾಕ್ರಾ ವಿರುದ್ಧ ಜಯ ಸಾಧಿಸಿದರು. ಇದಕ್ಕೂ ಮುನ್ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅವರು ರಾಹುಲ್ ರವಿ ಎದುರು ಜಯಿಸಿದ್ದರು.

ಪ್ರೀತಮ್ ಹರಿದಾಸ್, ಉದಯ್ ಮಾನೆ ಹಾಗೂ ಎನ್.ತಂಗರಾಜ ಅವರು ಕ್ರಮವಾಗಿ ಸಕೀಬ್ ಅಹ್ಮದ್, ಭಾನುಪ್ರತಾಪ್ ಸಿಂಗ್ ಹಾಗೂ ರಾಘವ್ ವಾಹಿ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.

ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸಕೀಬ್, ಪ್ರೀತಮ್, ಭಾನುಪ್ರತಾಪ್, ಉದಯನ್, ಎಸ್. ಲಾಕ್ರಾ, ರಾಘವ್, ತಂಗರಾಜ ಅವರು ಕ್ರಮವಾಗಿ ರಾಜಾ ಸರ್ದಾರ್, ಆದಿತ್ಯ ಭಂಡಾರ್ಕರ್, ಗಗನ್ ವರ್ಮ, ಸಮರೇಶ್ ಸರ್ದಾರ್, ಅಭಿಜಿತ್ ಚಢಾ, ಮರಿ ಮುತ್ತು ಹಾಗೂ ಮೊಹಮ್ಮದ್ ನಜೀಮ್ ಎದುರು ಜಯ ಸಾಧಿಸಿದರು.

ಸೆಮಿಫೈನಲ್‌ಗೆ ಅದಿತಿ: ಈ ಚಾಂಪಿ ಯನ್‌ಷಿಪ್ ಉದ್ದಕ್ಕೂ ಉತ್ತಮ ಪ್ರದರ್ಶನದ ಹಾದಿಯಲ್ಲಿಯೇ ಸಾಗಿ ರುವ ಅದಿತಿ ಅಶೋಕ್ ಅವರು ಸೆಮಿ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಅದಿತಿಗೆ ಅಮನ್‌ದೀಪ್ ಡ್ರಾಲ್ ಪ್ರಬಲ ಸವಾಲಾದರು. ಆದರೂ ಗೆಲು ವಿನ ಮುತ್ತು ಕೈಯಿಂದ ಜಾರಿ ಹೋಗದಂತೆ ಅದಿತಿ ಎಚ್ಚರ ವಹಿಸಿದರು.

ಪ್ರತಿಯೊಂದು ಸ್ಟ್ರೋಕ್ ನಲ್ಲೂ ಕರಾರುವಕ್ಕಾದ ಹೊಡೆತಗಳನ್ನು ಸಿಡಿಸಿದ ಅದಿತಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶ ಕಂಡರು.

ಗೌರಿ ಮೊಂಗಾ, ಗುರ್ಬಾನಿ ಸಿಂಗ್, ಶ್ರೇಯಾ ಘೈ ಅವರೂ ಕ್ವಾರ್ಟರ್ ಫೈನಲ್‌ನಲ್ಲಿ ಯಶ ಪಡೆದರು. ಇವರು ಕ್ರಮವಾಗಿ ತಲ್ವೀನ್ ಬತ್ರಾ, ಮಿಲಿ ಸರೋಹಾ ಹಾಗೂ ಅರ್ಮಿತಾ ಸರ್ನಾ ವಿರುದ್ಧ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.