ADVERTISEMENT

ಸೆಮಿಫೈನಲ್‌ಗೆ ಸೂಪರ್‌ ಕಿಂಗ್ಸ್‌

ಕ್ರಿಕೆಟ್‌: ಹಸ್ಸಿ ಬಲ, ಅಗ್ರಸ್ಥಾನದಲ್ಲಿ ದೋನಿ ಪಡೆ ಗಟ್ಟಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 19:59 IST
Last Updated 28 ಸೆಪ್ಟೆಂಬರ್ 2013, 19:59 IST
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಕ್‌ ಹಸ್ಸಿ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಕ್‌ ಹಸ್ಸಿ   

ರಾಂಚಿ (ಪಿಟಿಐ):  ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ ಬ್ರಿಸ್ಬೇನ್‌ ಹೀಟ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿತು. ಈ ಮೂಲಕ ಮಹೇಂದ್ರ ಸಿಂಗ್‌ ದೋನಿ ಬಳಗ ಸೆಮಿಫೈನಲ್‌ ಪ್ರವೇಶಿಸಿತು.

ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾದ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 137 ರನ್‌ ಪೇರಿಸಿತು. ಈ ಸಾಧಾರಣ ಗುರಿಯನ್ನು ಸೂಪರ್‌ ಕಿಂಗ್ಸ್‌ 15.5 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ತಲುಪಿತು.
ಆರಂಭಿಕ ಬ್ಯಾಟ್ಸ್‌ಮನ್‌ ಮೈಕ್‌ ಹಸ್ಸಿ (ಔಟಾಗದೆ 57, 48 ಎಸೆತ, 7 ಬೌಂಡರಿ) ಮತ್ತು ಮುರಳಿ ವಿಜಯ್‌ (42, 27 ಎಸೆತ, 5 ಬೌಂಡರಿ, 2 ಸಿಕ್ಸರ್‌) ಸೂಪರ್‌ ಕಿಂಗ್ಸ್‌ ತಂಡದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಬ್ರಿಸ್ಬೇನ್‌ ಹೀಟ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 137 (ಜೇಮ್ಸ್‌ ಹೋಪ್ಸ್‌ 20, ಕ್ರಿಸ್‌ ಲಿನ್‌ 29, ಕ್ರಿಸ್‌ ಹರ್ಟ್ಲಿ 35, ಬೆನ್‌ ಕಟಿಂಗ್‌ ಔಟಾಗದೆ 42, ರವೀಂದ್ರ ಜಡೇಜ 18ಕ್ಕೆ 2, ಮೋಹಿತ್‌ ಶರ್ಮ 35ಕ್ಕೆ 2, ಆರ್‌. ಅಶ್ವಿನ್‌ 10ಕ್ಕೆ 1).
ಚೆನ್ನೈ ಸೂಪರ್‌ ಕಿಂಗ್ಸ್‌ 15.5 ಓವರ್‌ಗಳಲ್ಲಿ 2  ವಿಕೆಟ್‌ಗೆ 140. (ಮೈಕ್‌ ಹಸ್ಸಿ ಔಟಾಗದೆ 57, ಮುರಳಿ ವಿಜಯ್‌ 42, ಸುರೇಶ್‌ ರೈನಾ 23; ಡೇನಿಯಲ್‌ ಕ್ರಿಸ್ಟಿಯನ್‌ 16ಕ್ಕೆ1).

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 8 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಮೈಕ್‌ ಹಸ್ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.