ADVERTISEMENT

ಸೈಕ್ಲಿಂಗ್ ಸಂಸ್ಥೆ: ಶ್ರೀಧರ ಗೋರೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST

ಹುಬ್ಬಳ್ಳಿ:  ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷರಾಗಿ ವಿಜಾಪುರದ ಶ್ರೀಧರ ಗೋರೆ ಮತ್ತು ಗೌರವ ಕಾರ್ಯದರ್ಶಿಯಾಗಿ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಶ್ರೀಶೈಲ ಕುರಣಿ ಆಯ್ಕೆಯಾಗಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಈಚೆಗೆ ನಡೆದ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಗಾಗಿ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಖಜಾಂಚಿಯಾಗಿ ಬಾಗಲಕೋಟೆಯ ಚನ್ನಪ್ಪ ಚನಾಳ ಆಯ್ಕೆಯಾಗಿದ್ದಾರೆ.

ಪೋಷಕರಾಗಿ ಸಿದ್ದು ನ್ಯಾಮಗೌಡ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತು ವಿವೇಕ ರಾವ್ ಪಾಟೀಲ, ಉಪಾಧ್ಯಕ್ಷರಾಗಿ ಗೋವಿಂದಗೌಡ ಪಾಟೀಲ, ಎಂ. ಮುನಿವೆಂಕಟಪ್ಪ, ರಾಮಣ್ಣ ಪೂಜಾರಿ, ಚನ್ನಪ್ಪ ಜಗಲಿ, ಎನ್.ಬಸವರಾಜ ಮತ್ತು ರಾಜು ಬಿರಾದಾರ ಆಯ್ಕೆಯಾಗಿದ್ದಾರೆ.

ಸಹ ಕಾರ್ಯದರ್ಶಿಗಳಾಗಿ ಎಂ. ರಾಮಚಂದ್ರ ಮತ್ತು ಸಂಜು ಫಡತಾರೆ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ ಪಾಟೀಲ ಮತ್ತು ವಿಠಲ ಬುರ್ಜಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ ಪೂಜಾರಿ, ಮಾಧುರಿ ದೇವಧರ, ಮೊಹಮ್ಮದ್ ಗಫೂರ್, ಪ್ರಕಾಶ ಕುಲಕರ್ಣಿ, ಎಂ. ಲಕ್ಷ್ಮಣ, ತಾಂತ್ರಿಕ ಸದಸ್ಯರಾಗಿ ಯಂಕಪ್ಪ ಎಂಟೆತ್ತ, ಮುತ್ತಪ್ಪ ಕುರಿಯಾರ, ಭೀಮಪ್ಪ ಮಧುರಖಂಡಿ ಮತ್ತು ಸೋಮಣ್ಣ ಕೊಡ್ಲಿ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.