ADVERTISEMENT

ಸೈನಾ, ಸಿಂಧುಗೆ ಕಠಿಣ ಸವಾಲು

ಇಂದಿನಿಂದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:51 IST
Last Updated 3 ಮಾರ್ಚ್ 2014, 19:51 IST
ಸೈನಾ, ಸಿಂಧುಗೆ ಕಠಿಣ ಸವಾಲು
ಸೈನಾ, ಸಿಂಧುಗೆ ಕಠಿಣ ಸವಾಲು   

ಬರ್ಮಿಂಗ್‌ಹ್ಯಾಮ್‌ (ಪಿಟಿಐ/ ಐಎಎನ್‌ಎಸ್‌): ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಪಿ.ವಿ.ಸಿಂಧು ಅವರು ಮಂಗಳವಾರ ಇಲ್ಲಿ ಆರಂಭ ವಾಗಲಿರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಠಿಣ ಸವಾಲು ಎದುರಿಸಬೇಕಾಗಿದೆ.

ಸೈನಾ ಅವರು ₨ 2.48 ಕೋಟಿ ಬಹುಮಾನ ಮೊತ್ತದ ಈ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಶ್ರೇಯಾಂಕ ಪಡೆದಿರುವ ಭಾರತದ ಏಕೈಕ ಆಟಗಾರ್ತಿ ಕೂಡ. ಹೋದ ವರ್ಷ ಈ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ಸೆಮಿಫೈನಲ್‌ ಪ್ರವೇಶಿಸಿದ್ದರು. 2010 ರಲ್ಲೂ ಅವರು ಈ ಸಾಧನೆ ಮಾಡಿ ದ್ದರು.

ಹಲವು ತಿಂಗಳಿನಿಂದ ಪ್ರಶಸ್ತಿ ಬರ ಎದುರಿಸಿದ್ದ ನೆಹ್ವಾಲ್‌ ಜನವರಿಯಲ್ಲಿ ಲಖನೌದಲ್ಲಿ ನಡೆದ ಸೈಯದ್‌ ಮೋದಿ ಅಂತರರಾಷ್ಟ್ರೀಯ ಗ್ರ್ಯಾನ್‌ ಪ್ರಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ನ್ಯಾಷನಲ್‌ ಇಂಡೋರ್‌ ಅರೇನಾ ದಲ್ಲಿ ನಡೆಯಲಿರುವ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಸ್ಕಾಟ್ಲೆಂಡ್‌ನ ಕರ್ಸ್ಟಿ ಗ್ಲಿಮಾರ್‌ ಎದುರು ಪೈಪೋಟಿ ನಡೆಸ ಲಿದ್ದಾರೆ. ಗ್ಲಿಮಾರ್‌ 20ನೇ ರ್‍ಯಾಂಕ್‌ನ ಆಟಗಾರ್ತಿ. ಮೊದಲ ಸುತ್ತಿನಲ್ಲಿ ಯಶಸ್ಸು ಕಂಡರೆ ಹೈದರಾಬಾದ್‌ನ ಆಟಗಾರ್ತಿ ಎರಡನೇ ಸುತ್ತಿನಲ್ಲಿ ಜರ್ಮನಿಯ ಜೂಲಿಯಾನೆ ಶೆಂಕ್‌ ಎದುರು ಹೋರಾಡಬೇಕು. ಶೆಂಕ್‌ 2013ರ ಜೂನ್‌ನಲ್ಲಿ ನಡೆದ ಇಂಡೊನೇಷ್ಯಾ ಓಪನ್‌ನಲ್ಲಿ ಸೈನಾ ಎದುರು ಗೆದ್ದಿದ್ದರು.

‘ಈ ಟೂರ್ನಿಗೆ ಪೂರ್ಣ ಸಿದ್ಧಳಾಗಿ ದ್ದೇನೆ. ಒಂದು ತಿಂಗಳು ತರಬೇತಿ ಪಡೆದಿದ್ದೇನೆ’ ಎಂದು ಸೈನಾ ಪ್ರತಿಕ್ರಿಯಿಸಿದ್ದಾರೆ. 9ನೇ ರ್‍ಯಾಂಕ್‌ನ ಸಿಂಧು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಯು ಸನ್‌ ಎದುರು ಆಡಲಿದ್ದಾರೆ. ಅದರಲ್ಲಿ ಯಶಸ್ವಿಯಾದರೆ ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಯಿಹಾನ್‌ ವಾಂಗ್‌ ಎದುರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.